ಇತ್ತಿಚೆಗೆ ಕಬ್ಬು ಬೆಳೆಗಾರರು ಒಕ್ಕಟ್ಟಿನ ಹೋರಾಟದ ಮೂಲಕ ಸರ್ಕಾರದ ವಿರುದ್ಧ ತೊಡೆ ತಟ್ಟಿ ಯಶಸ್ವಿಯಾಗಿದ್ದರು. ಕಬ್ಬಿನ ಬೆಲೆಗಾಗಿ ನಡೆದ ಹೋರಾಟವು ಇಡೀ ರಾಜ್ಯದಲ್ಲಿ ಕಿಚ್ಚು ಹಚ್ಚಿಸಿತ್ತು. ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಇದೀಗ ರೈತರು ಮತ್ತೆ ಹೋರಾಟದ ಹಾದಿ ಹಿಡಿಯು ವಂತಾಗಿದೆ. ಆದ್ರೆ ಈ ಬಾರಿ ಸಕ್ಕರೆ ಕಾರ್ಖಾನೆಯೊಂದು ರೈತರಿಗೆ ತೂಕದಲ್ಲಿ ಮೋಸ ಮಾಡಿದೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತೆ ಹೋರಾಟದ ಹಾದಿ ಹಿಡಿಯುವಂತೆ ಸ್ವತಃ ರೈತರು ಕಾರ್ಖಾನೆಯ ಹಗರಣ ಹೊರಗೆಡವಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಇತ್ತಿಚೆಗೆ ರೈತರು ಕಬ್ಬಿನದ ದರ ಹೆಚ್ಚಿಸಿಕೊಳ್ಳಲು ರಾಜ್ಯದಲ್ಲಿ ಕ್ರಾಂತಿಯನ್ನೇ ಮಾಡಿದ್ದರು. ಗೆಲುವಿನ ಸಂತಸದಲ್ಲಿ ಇದ್ದ ರೈತರಿಗೆ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಅ ಮಾಡುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂತಹ ಗಂಭೀರ ಪ್ರಕರಣವನ್ನು ರೈತರೆ ಪತ್ತೆ ಹಚ್ಚಿದ್ದಾರೆ. ಇದರಿಂದ ರೈತರು ಇದೀಗ ಗರಂ ಆಗಿದ್ದು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ ಬಿಕೆ ಗ್ರಾಮದ ಶ್ರೀ ಸಂಗಮನಾಥ ಸಕ್ಕರೆ ಕಾರ್ಖಾನೆ ಯಲ್ಲಿ ಕಬ್ಬಿನ ತೂಕದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ್ ಆರೋಪಿಸಿದ್ದಾರೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಬ್ಬಿನ ತೂಕದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ.
ರೈತ ಮುಖಂಡರ ಆರೋಪಿಸಿದಂತೆ ಕಾರ್ಖಾನೆಗೆ ಕಬ್ಬಿನ ಗಾಡಿ ಹೋಗುವ ಮೊದಲು ಜೆರಟಗಿ ಗ್ರಾಮದ ಹತ್ತಿ ಮಿಲ್ನಲ್ಲಿ ತೂಕ ಮಾಡಿಸಿದಾಗ 33 ಟನ್ ತೂಕ ದಾಖಲಾಗಿದ್ದು, ಅದೇ ಗಾಡಿಯನ್ನು ಕಾರ್ಖಾನೆಯಲ್ಲಿ ತೂಕ ಮಾಡಿಸಿದಾಗ 32 ಟನ್ ಮಾತ್ರ ತೋರಿಸಲಾಗಿದೆ. ಈ ಮೂಲಕ 1 ಟನ್ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂಬುದು ರೈತರ ವಾದವಾಗಿದೆ. ಈ ಕುರಿತು ನಿನ್ನೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಆಹಾರ ಇಲಾಖೆಯ ಅಧಿಕಾರಿಗಳು, ಅಳತೆ ಮತ್ತು ತೂಕ ಇಲಾಖೆ ಅಧಿಕಾರಿಗಳು ಹಾಗೂ ಸಿಂದಗಿಯ ತಹಶೀಲ್ದಾರರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯ ತೀರ್ಮಾನದಂತೆ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಘಟನೆಯ ಸಂಪೂರ್ಣ ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನಾ ವರದಿ ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೂ ರೈತರು ಹಾಗೂ ಹೋರಾಟಗಾರರ ಒತ್ತಾಯದಂತೆ, ಈ ಪ್ರಕರಣದಲ್ಲಿ ಅಪರಾಧ ಸಾಬೀತಾದಲ್ಲಿ, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರ ಹೇಳಿಕೆಯಂತೆ ₹5 ಲಕ್ಷ ದಂಡ (ಬಹುಮಾನ) ಘೋಷಣೆ ಮಾಡಬೇಕು ಅದು ಕೂಡಾ ಮಾಧ್ಯಮಗಳ ಮುಂದೆ ಇಡೀ ರಾಜ್ಯದ ಜನತೆಗೆ ಮಾಹಿತಿ ನೀಡಬೇಕು. ಮೋಸ ಮಾಡಿದ ಕಾರ್ಖಾನೆ ಮಾಲೀಕರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು,“ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಬೇಕು. ರೈತ ಉಳಿದರೆ ಕಾರ್ಖಾನೆ, ರೈತ ಉಳಿದರೆ ರಾಜ್ಯ,
ರೈತ ಉಳಿದರೆ ದೇಶ.
ಎಂದು ರೈತರು ಒಗ್ಗಟ್ಟಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ. ಸರ್ಕಾರ ಈ ಕುರಿತು ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ.
