BELAGAVI

ಬೆಳಗಾವಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ; ಶಾಂತಿ ಮತ್ತು ನಮ್ರತೆಯ ಸಂದೇಶ ನೀಡಿದ ಬಿಷಪ್ ಡೆರೆಕ್ ಫೆರ್ನಾಂಡಿಸ್

Share

ಶಾಂತಿ ಮತ್ತು ನಮ್ರತೆಯ ದೂತ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಯಿತು. ಚಳಿಯನ್ನೂ ಲೆಕ್ಕಿಸದೆ ಕ್ರೈಸ್ತ ಬಾಂಧವರು ಮಧ್ಯರಾತ್ರಿಯ ಪ್ರಾರ್ಥನಾ ಕೂಟಗಳಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿ ಕ್ಯಾಂಪ್ ಪ್ರದೇಶದ ಫಾತಿಮಾ ಕ್ಯಾಥೆಡ್ರಲ್‌ನಲ್ಲಿ ಬಿಷಪ್ ಡೆರೆಕ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಅವರು ತಮ್ಮ ಸಂದೇಶದಲ್ಲಿ ಬಿಷಪ್, “ಜಗತ್ತಿನ ಇತಿಹಾಸದಲ್ಲಿ ಅನೇಕ ಶಿಶುಗಳು ಬೆಳೆದು ರಾಜರಾಗಿದ್ದಾರೆ, ಆದರೆ ಒಬ್ಬ ರಾಜನೇ ಶಿಶುವಾಗಿ ಜನಿಸಿದ್ದು ಕ್ರಿಸ್ತನ ಇತಿಹಾಸದಲ್ಲಿ ಮಾತ್ರ. ಕತ್ತಲೆಯನ್ನು ಹೋಗಲಾಡಿಸಲು ಬೆಳಕಾಗಿ ಬಂದ ಕ್ರಿಸ್ತನನ್ನು ನಾವು ಹೃದಯದಲ್ಲಿ ಬರಮಾಡಿಕೊಳ್ಳಬೇಕು,” ಎಂದು ಕರೆ ನೀಡಿದರು.

ನಂತರ ಬಿಷಪ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಎಲ್.ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಶಾಸಕ ಆಸಿಫ್ ಸೇಠ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕ್ರಿಸ್‌ಮಸ್ ಕೇಕ್ ಕತ್ತರಿಸುವ ಮೂಲಕ ಶುಭ ಹಂಚಿಕೊಂಡರು. ನಗರದ ಸೇಂಟ್ ಆಂಥೋನಿ ಚರ್ಚ್, ಮೆಥೋಡಿಸ್ಟ್ ಚರ್ಚ್ ಸೇರಿದಂತೆ ವಿವಿಧೆಡೆ ಭಕ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

Tags:

error: Content is protected !!