ರಾಜ್ಯದ ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಕರಿಯೋಗ ಸಿದ್ದ ಮಠದ ಅಮರೇಶ್ವರ ಮಹಾರಾಜರು ಮಾಡುತ್ತಿರುವ ಪ್ರಯತ್ನ ವಿಶೇಷವಾಗಿದೆ ಈ ಪ್ರಯತ್ನಕ್ಕೆ ಕೈಜೋಡಿಸಲು ಸಂಸ್ಥೆಗಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಒಂದು ಕೋಟಿ ರೂಪಾಯಿ ಅನುದಾನ ಶೀಘ್ರದಲ್ಲಿ ನೀಡುತ್ತೇನೆ ಎಂದು ಎಂಎಲ್ಸಿ ಹಾಗೂ ಮುಖ್ಯಮಂತ್ರಿಗಳ ಸುಪುತ್ರರಾದ ಯತಿಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.

ಗುರುವಾರ ರಂದು
ಕವಲಗುಡ್ಡ ಗ್ರಾಮದ ಶ್ರೀಕರಿಯೋಗಸಿದ್ದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಿದ್ದರತ್ನ ಪ್ರೌಢಶಾಲೆ ಕೌಲಗುಡ್ಡ ಈ ಶಾಲೆಯ 13ನೇ ವಾರ್ಷಿಕೋತ್ಸವ ನಿಮಿತ್ಯವಾಗಿ ಅತಿಥಿಗಳಾಗಿ ಪಾಲ್ಗೊಂಡಿರುವ ಯತೀಂದ್ರ ಸಿದ್ದರಾಮಯ್ಯ ಇವರು ಇಲ್ಲಿಯ ಪ್ರಗತಿ ನೋಟವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದರು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿದ್ದಯೋಗಿ ಅಂಬರೀಶ್ ಅವರ ಮಹಾರಾಜರು ಮಾತನಾಡುವಾಗ ಗಡಿಭಾಗದಲ್ಲಿ ಎಷ್ಟೋ ಬಡ ಅನಾಥ ಮಕ್ಕಳ ಓದಲಿ ಈ ಭಾವನೆಯಿಂದ ಸಂಸ್ಥ ಕಟ್ಟುಲಾಗಿದೆ ಈ ಸಂಸ್ಥೆ ಗಾಗಿ ಅನಿಕ್ ದಾನಿಗಳು ಮುಂದೆ ಬಂದಿದ್ದು ಸಹಕಾರ ನೀಡುತ್ತಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಇವರು ಸಂಸ್ಥೆಗೆ ಭೇಟಿ ನೀಡಿ ಸಹಕಾರ ನೀಡುವ ಭರವಸೆ ನೀಡಿದ್ದರಿಂದ ಒಂದು ಹಂಡೆ ಹಾಲು ಕುಡಿದಂತಾಗಿದೆ ಎಂದು ಸಂತಸದಿಂದ ಹೇಳಿಕೊಂಡರು.
ಸಮಾರಂಭದಲ್ಲಿ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿ ಸೋಮಣ್ಣ ಬೇವಿನಮರದ, ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರ ವಿಭಾಗದ ಅಧ್ಯಕ್ಷ ಲಕ್ಷ್ಮಣ್ ಚಿಂಗಳೆ, ಅಥಣಿ ರೋಟರಿ ಕ್ಲಬ್ ಅಧ್ಯಕ್ಷ ಗಜಾನನ ಮಂಗಸುಳಿ, ಅಸ್ಲಂ ನಾಲಬಂದ, ಶ್ರೀಗಂಧ ಆನೇಕರು ಇದ್ದರು.
ಪತ್ರಕರ್ತರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿಚಾರಿಸಿದಾಗ ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರು ನಾನೇ ಐದು ವರ್ಷದ ಅವಧಿಯ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ ಈ ಬಗ್ಗೆ ಪದೇಪದೇ ನೀವು ಕೇಳುವುದು ತಪ್ಪ ಎಂದರು.
