BELAGAVI

ನಮ್ಮ ಬೆಳಗಾವಿ ಉತ್ಸವ – ಭವ್ಯ ಪ್ರದರ್ಶನ’ಕ್ಕೆ ಭರ್ಜರಿ ಪ್ರತಿಕ್ರಿಯೆ

Share

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಲಾದ ‘ನಮ್ಮ ಬೆಳಗಾವಿ ಉತ್ಸವ – ಭವ್ಯ ಪ್ರದರ್ಶನ’ ಭರ್ಜರಿ ಉತ್ಸಾಹದೊಂದಿಗೆ ನಡೆಯುತ್ತಿದೆ.

ಈ ಉತ್ಸವದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳು, ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ ಯಲ್ಲಮ್ಮ ದೇವಿಯ ಮನಮೋಹಕ ದೇವಾಲಯದ ಪ್ರತಿರೂಪ, ಹಾಗೆಯೇ ಕೆಎಂಎಫ್ ಡೇರಿ ಮಾದರಿ ನಾಗರಿಕರ ಗಮನ ಸೆಳೆಯುತ್ತಿವೆ.ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ನಡೆಯುತ್ತಿದ್ದು, ಜನರಿಂದ ಭಾರೀ ಸ್ಪಂದನೆ ದೊರೆಯುತ್ತಿದೆ.

ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಮನ ಸೆಳೆಯುತ್ತಿರುವ ‘ಜಲಪರಿ’ ವಿಶೇಷ ಗಮನ ಸೆಳೆದಿದ್ದು, ಅದನ್ನು ನೋಡಲು ಅಪಾರ ಜನಸಂದಣಿ ಕಾಣುತ್ತಿದೆ.ಮನರಂಜನೆಗಾಗಿ ಇಲ್ಲಿ ಫನ್‌ಫೇರ್ ಆಟಿಕೆಗಳು, ಅಮ್ಯೂಸ್‌ಮೆಂಟ್ ಪಾರ್ಕ್, ಡ್ರಾಗನ್ ಟ್ರೈನ್, ಟೋರಾ–ಟೋರಾ, ಜೈಂಟ್ ವೀಲ್ ಸೇರಿದಂತೆ ಹಲವಾರು ರೋಮಾಂಚಕಾರಿ ರೈಡ್‌ಗಳು ಲಭ್ಯವಿವೆ.

ಅಲ್ಲದೆ ವಿವಿಧ ರೀತಿಯ ಆಹಾರ ಮಳಿಗೆಗಳು ಮತ್ತು ಆಕರ್ಷಕ ಶಾಪಿಂಗ್ ಮಳಿಗೆಗಳು ಈ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿವೆ.ಮನರಂಜನೆಯ ಮಹಾಪೂರ, ಮನಮೋಹಕ ದೃಶ್ಯಗಳು, ಲೈವ್ ಕಾರ್ಯಕ್ರಮಗಳು, ರೋಮಾಂಚಕಾರಿ ಆಟಿಕೆಗಳು ಹಾಗೂ ರುಚಿಕರ ಆಹಾರ ಪದಾರ್ಥಗಳಿಂದ ‘ನಮ್ಮ ಬೆಳಗಾವಿ ಉತ್ಸವ’ ಎಲ್ಲ ವಯೋಮಾನದ ನಾಗರಿಕರಿಗೂ ಆಕರ್ಷಣೆಯ ಕೇಂದ್ರವಾಗಿದೆ.

ಪ್ರತಿದಿನ ಜನರು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಪ್ರದರ್ಶನದ ಒಳಪ್ರವೇಶಿಸುತ್ತಿದ್ದಂತೆ, ಜನರ ಗಮನವನ್ನು ಜಲಪರಿಗಳು ಸೆಳೆಯುತ್ತಿದ್ದಾರೆ. ಬೆಳಗಾವಿಯಲ್ಲೇ ಮೊದಲಬಾರಿ ಈ ಉಪಕ್ರಮವನ್ನು ಮಾಡಲಾಗಿದೆ. ಬೆಂಗಳೂರಿನಿಂದ ಬಂದ್ ನಿರ್ಮಲಾ ಅಶೋಕ್ ಶಿಂಧೆ ಅವರು ಜಲಪರಿಯ ಬಗ್ಗೆ ಹೇಳಿದ್ದು ಹೀಗೆ.

ಮೈಸೂರಿನಲ್ಲಿ ದಸರಾ ವೇಳೆ ಜನಮೆಚ್ಚುಗೆಗೆ ಪಾತ್ರವಾಗಿದ್ದ, ಈ ಪ್ರದರ್ಶನ ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿಗರ ಕುತೂಹಲವನ್ನು ಕೆರಳಿಸಿತ್ತು. ಇದನ್ನ ನೋಡಲೇ ಬೇಕೆಂದು ಕುಟುಂಬ ಸಮೇತ ಆಗಮಿಸಿದ್ದೇವೆ. ಇದನ್ನು ನೋಡಲೂ ಸುಮಾರು 3 ಗಂಟೆಗಳ ಕಾಲಾವಕಾಶ ಬೇಕು ಎಂದು ಗಣೇಶ್ ಅವರು ಹೇಳಿದರು.

ಖಾನಾಪೂರ ತಾಲೂಕಿನ ಕಕ್ಕೇರಿಯಿಂದ ಆಗಮಿಸಿದ್ದ ಅಖಿಲೇಶ್ ಸುತಾರ್ ಮತ್ತು ಬೆಳಗಾವಿಯ ಮೀಲನ್ ಅನಗೋಳಕರ ಅವರು, ಜಲಪರಿಯ ಆಟವನ್ನು ಕೊಂಡಾಡಿದರು.

ಹಾಗಾದರೇ, ಇನ್ನೇಕೆ ತಡ ಇಂದೇ ಭೇಟಿ ನೀಡಿರಿ. ಸಮಯ: ಸಂಜೆ ೪ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ, ‘ನಮ್ಮ ಬೆಳಗಾವಿ ಉತ್ಸವ – ಭವ್ಯ ಪ್ರದರ್ಶನ ಸಿಪಿಎಡ್ ಮೈದಾನ, ಕ್ಲಬ್ ರಸ್ತೆ, ಬೆಳಗಾವಿ.

Tags:

error: Content is protected !!