Dharwad

ಧಾರವಾಡದಲ್ಲಿ “ಮಾರ್ಕ್‌”ಗೆ ಅದ್ಧೂರಿ ಸ್ವಾಗತ…

Share

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ “ಮಾರ್ಕ್” ಚಿತ್ರ ಇಂದು ತೆರೆಗಪ್ಪಳಿಸಿದ್ದು, ಧಾರವಾಡದಲ್ಲಿ ಕಿಚ್ಚಾ ಸುದೀಪ್ ಅಭಿಮಾನಿಗಳು ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಿದರು.

ವೈ- ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ಮಾರ್ಕ್ ಚಿತ್ರ ಪ್ರದರ್ಶನ ಕಾಣುತ್ತಿದೆ. ಮೊದಲ ಶೋ ಹೌಸ್‌ಫುಲ್ ಆಗಿತ್ತು. ಕಿಚ್ಚನ ಅಭಿಮಾನಿಗಳು ಸುದೀಪ್ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸುದೀಪ್ ಪರ ಘೋಷಣೆ ಕೂಗಿದರು. ಜತೆಗೆ ಪಟಾಕಿ ಸಿಡಿಸಿ ಮಾರ್ಕ್ ಚಿತ್ರವನ್ನು ಬರಮಾಡಿಕೊಂಡರು. ಚಿತ್ರಮಂದಿರದ ಒಳಗೆ ಡಾ.ವಿಷ್ಣುವರ್ಧನ್ ಹಾಗೂ ಸುದೀಪ್ ಅವರ ಭಾವಚಿತ್ರ ಹಿಡಿದು ಪ್ರೇಕ್ಷಕರು ಸಿನಿಮಾ ವೀಕ್ಷಣೆ ಮಾಡಿದರು. ಚಿತ್ರದಲ್ಲಿ ಸುದೀಪ್ ಅವರು ಎಂಟ್ರಿಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಒಟ್ಟಾರೆ ವಿದ್ಯಾಕಾಶಿ ಧಾರವಾಡದಲ್ಲಿ ಮಾರ್ಕ್ ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಮೊದಲ ಶೋ ಹೌಸ್‌ಫುಲ್ ಆಗಿತ್ತು.

Tags:

error: Content is protected !!