ದಲಿತ ಸಂಘರ್ಷ ಸಮಿತಿ ಬೆಳಗಾವಿ ಜಿಲ್ಲಾ ಶಾಖೆಯ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರರು ಅಸ್ಪೃಶ್ಯತೆ, ಜಾತಿಯತೆ, ಲಿಂಗ ತಾರತಮ್ಯ, ಮೇಲು-ಕೀಳಿನ ಸಂಹಿತೆ ಮನುಸ್ಮೃತಿಗೆ ಬೆಂಕಿಯಿಟ್ಟು ಮಾನವಧರ್ಮಕ್ಕಾಗಿ ಹೋರಾಟ ಆರಂಭಿಸಿದ ದಿನವನ್ನು ಆಚರಿಸಲಾಯಿತು.

ಬೆಳಗಾವಿ ನಗರದ ಡಾ. ಅಂಬೇಡ್ಕರ್ ಉದ್ಯಾನದಲ್ಲಿ ದಲಿತ ಮುಖಂಡು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 1927ರ ಡಿಸೆಂಬರ್ 25 ರಂದು ಬಾಬಾಸಾಹೇಬ್ ಅಂಬೇಡ್ಕರರು ಅಸ್ಪೃಶ್ಯತೆ, ಜಾತಿಯತೆ, ಲಿಂಗ ತಾರತಮ್ಯ, ಮೇಲು-ಕೀಳಿನ ಸಂಹಿತೆ ಮನುಸ್ಮೃತಿಗೆ ಬೆಂಕಿಯಿಟ್ಟು ಮಾನವಧರ್ಮಕ್ಕಾಗಿ ಹೋರಾಟ ಆರಂಭಿಸಿದರು. ಇದಕ್ಕೆ 98 ವರ್ಷಗಳು ಕಳೆದಿವೆ. ಮನುಸ್ಮೃತಿಯ ಪ್ರತಿಗಳನ್ನು ಸುಟ್ಟು ಈ ಹೋರಾಟದ ದಿನವನ್ನು ಇಂದು ನೆನಪಿಸಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಮಹಾದೇವ ತಳವಾರ ಅವರು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಮಾನವರ ಶೋಷಣೆ ನಡೆಯುತ್ತಿತ್ತು. ಅಸ್ಪೃಶ್ಯತೆಯನ್ನು ಜಾರಿಗೆ ತಂದು ಮಾನವಧರ್ಮಕ್ಕೆ ಅಪಚಾರವೆಸಗಿ ಮನುಸ್ಮೃತಿಯನ್ನು ಪಾಲಿಸಲಾಗುತ್ತಿತ್ತು. ಆಗ ಅದನ್ನ ಮಹಾಡ್ ಗ್ರಾಮದಲ್ಲಿ ಸುಟ್ಟು ಬಾಬಾಸಾಹೇಬ್ ಅಂಬೇಡ್ಕರರು ಮನುಸ್ಮೃತಿಯನ್ನು ಸುಟ್ಟು ಡಿಸೆಂಬರ್ 25 1927 ರಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಆರಂಭಿಸಿದರು. ಆದರೇ ಇಂದಿಗೂ ಜಾತಿ ವ್ಯವಸ್ಥೆ ಕೆಲವು ಕಡೆ ಕಂಡುಬರುತ್ತಿದ್ದು, ಇದನ್ನ ಹೋಗಲಾಡಿಸಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಅಂಧಶ್ರದ್ಧೆ, ಜಾತಿವಾದ, ಮಹಿಳೆಯರಿಗೆ ಯಾವುದೇ ಹಕ್ಕು ನೀಡದಿರುವಂತಹ ಹಲವು ವಿಷಯಗಳು ಮನುಸ್ಮತಿ ಒಳಗೊಂಡಿದೆ. ಇದನ್ನ ಸುಟ್ಟು ಬಾಬಾಸಾಹೇಬರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟವನ್ನು ಆರಂಭಿಸಿದರು. ಆದರೇ, ಇಂದಿಗೂ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮಾನ್ಯಾಳ ಮರ್ಯಾದಾ ಹತ್ಯೆಯೇ ಉದಾಹರಣೆಯಾಗಿದೆ. ಮಾನ್ಯಾಳ ಹಂತಕರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಮುಖಂಡ ಮಲ್ಲೇಶ್ ಚೌಗಲೆ ಆಗ್ರಹಿಸಿದರು.
