Savadatti

ಸವದತ್ತಿಯಲ್ಲಿ ಚಡ್ಡಿ ಗ್ಯಾಂಗ್ ಕೈಚಳಕ…

Share

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್‌ ಕೃತ್ಯದಿಂದ ಆತಂಕ ಉಂಟಾಗಿದೆ. ಎಂಟು ಜನರನ್ನು ಒಳಗೊಂಡ ಚಡ್ಡಿ ಗ್ಯಾಂಗ್‌ ಪಟ್ಟಣದ ಕಾಳಿಕಾ ಜುವೆಲರ್ಸ್ ಎಂಬ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಿದೆ.
ಸವದತ್ತಿ ಪಟ್ಟಣದ ರಾಮಾಪುರ ಸೈಟ್‌ ಸಮೀಪದ ಕತ್ರಾಳ ಕಟ್ಟಡದಲ್ಲಿರುವ ಈ ಮಳಿಗೆ ಸುರೇಶ ಬಡಿಗೇರ ಅವರಿಗೆ ಸೇರಿದ್ದು, ಕಳ್ಳರು ಮಳಿಗೆಗೆ ನುಗ್ಗಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಎಗರಿಸಿಕೊಂಡಿದ್ದಾರೆ. ಕಳ್ಳತನದ ದೃಶ್ಯಗಳು ಮಳಿಗೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಘಟನೆ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವ ಭರವಸೆ ನೀಡಲಾಗಿದ್ದು, ಪಟ್ಟಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.
ಚಡ್ಡಿ ಗ್ಯಾಂಗ್ ಹಾವಳಿಯಿಂದ ಸ್ಥಳೀಯ ವ್ಯಾಪಾರಿಗಳು ಹಾಗೂ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Tags:

error: Content is protected !!