ಉದ್ಯೋಗ ಖಾತ್ರಿ ಹೊಸ ಕಾನೂನುನನ್ನು ವಿರೋಧಿಸಿ ಇಂದು ಖಾನಾಪೂರದ ಜಾಗೃತ ಮಹಿಳಾ ಒಕ್ಕೂಟ, ಗ್ರಾಮೀಣ-ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.


ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನಾಡಿಯಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ “ವಿಕಸಿತ್ ಭಾರತ್ – ಜಿ.ಆರ್.ಎ.ಎಮ್.ಜಿ ಬಿಲ್ 2025” ಅನ್ನು ವಿರೋಧಿಸಿ ಬೆಳಗಾವಿ ಜಿಲ್ಲೆಯ ನರೇಗಾ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಕ್ಕೆ ಹಕ್ಕೊತ್ತಾಯ ಮಂಡಿಸಿದ್ದಾರೆ.
ಕೇಂದ್ರ ಸರ್ಕಾರ 100 ದಿನಗಳಿಂದ 125 ದಿನಗಳಿಗೆ ಉದ್ಯೋಗ ಹೆಚ್ಚಿಸುವುದಾಗಿ ಹೇಳುತ್ತಿದ್ದರೂ, ಹೊಸ ಬಿಲ್‌ನಲ್ಲಿರುವ ನಿಯಮಗಳು ಕಾರ್ಮಿಕರಿಗೆ ಕೆಲಸ ಸಿಗದಂತೆ ಮಾಡುತ್ತವೆ ಎಂಬುದು ಕಾರ್ಮಿಕರ ಆರೋಪವಾಗಿದೆ.ಈ ಹಿಂದೆ ಗ್ರಾಮ ಸಭೆಗಳ ಮೂಲಕವೇ ಗ್ರಾಮಕ್ಕೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಹೊಸ ಮಸೂದೆಯಲ್ಲಿ ಕೇಂದ್ರದ ಹಸ್ತಕ್ಷೇಪ ಹೆಚ್ಚಿದ್ದು, ಗ್ರಾಮ ಸಭೆಗಳ ನಿರ್ಧಾರದ ಹಕ್ಕನ್ನು ಕಸಿದುಕೊಳ್ಳಲಾಗಿದೆ.ಈ ಮೊದಲು ಕೇಂದ್ರ ಸರ್ಕಾರವೇ ಹೆಚ್ಚಿನ ಪಾಲು ನೀಡುತ್ತಿತ್ತು. ಆದರೆ ಈಗ ಕೇಂದ್ರ 60% ಮತ್ತು ರಾಜ್ಯ 40% ರಷ್ಟು ಹಣ ಭರಿಸಬೇಕೆಂದು ನಿಯಮ ರೂಪಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು ಇಷ್ಟು ದೊಡ್ಡ ಮೊತ್ತ ಭರಿಸಲು ಸಾಧ್ಯವಾಗದೆ ಯೋಜನೆ ಹಳ್ಳ ಹಿಡಿಯುವ ಭೀತಿ ಎದುರಾಗಿದೆ.ಕೇಂದ್ರ ಸರ್ಕಾರ ಕೂಡಲೇ ಹೊಸದಾಗಿ ರೂಪಿಸಿರುವ ವಿಕಸಿತ್ ಭಾರತ್-ಜಿ.ಆರ್.ಎ.ಎಮ್.ಜಿ ಬಿಲ್ 2025 ಅನ್ನು ರದ್ದುಗೊಳಿಸಬೇಕು.ಹಳೆಯ ನರೇಗಾ ಕಾನೂನಿನ ಮೂಲ ಆಶಯಕ್ಕೆ ಧಕ್ಕೆ ತರಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಹೊಸ ಕಾನೂನುನನ್ನು ವಿರೋಧಿಸಿ ಇಂದು ಖಾನಾಪೂರದ ಜಾಗೃತ ಮಹಿಳಾ ಒಕ್ಕೂಟ, ಗ್ರಾಮೀಣ-ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
