ಸರಕಾರಿ ಅನುದಾನವನ್ನು ಕೇವಲ ಸಮುದಾಯ ಭವನ, ಆಯಾ ಜಾತಿವಾರು ಮಂದಿರ ನಿರ್ಮಾಣಕ್ಕೆ ಮಾತ್ರ ಬಳಕೆ ಮಾಡುವದನ್ನು ಬಿಟ್ಟು ಅನುದಾನದ ಸಿಂಹಪಾಲು ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸದ್ಭಳಕೆ ಮಾಡಿದ್ದೇ ಆದರೆ ಶಿಕ್ಷಣ ಗಟ್ಟಿಗೊಳಿಸುವುದರ ಜೊತೆಗೆ ಶೈಕ್ಷಣಿಕ ಬದಲಾವಣೆ ಕಾಣಬಹುದು ಎಂದು ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಮಂಗಳವಾರ ದಿ. 23 ರಂದು ಬೆಳಗಾವಿ ತಾಲೂಕಿನ ಕಾಕತಿ ಕ್ಲಸ್ಟರ್ ಹಂತದ ‘ಕಲಿಕಾ ಹಬ್ಬ ‘ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಾನ್ಯ ವಿಧಾನಪರಿಷತ್ ಸದಸ್ಯರು ಮಾತನಾಡಿ ತಮ್ಮ ಅನುದಾನದಲ್ಲಿ ಬೆಳಗಾವಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಪೀಠೋಪಕರಣ, ಶಾಲಾ ಹೆಚ್ಚುವರಿ ಕಟ್ಟಡ, ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ಕಂಪ್ಯೂಟರ್ ಇನ್ನಿತರ ಅವಶ್ಯಕತೆಗಳನ್ನು ಪೂರೈಸಿದ್ದು ಇವುಗಳ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ನೈತಿಕತೆ ಮೌಲ್ಯಯುತವಾದ ಶಿಕ್ಷಣವನ್ನು ಕೊಟ್ಟು ಬಡ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುವಲ್ಲಿ ಇಲಾಖೆಯ ಇಂತಹ ಕಾರ್ಯಕ್ರಮಗಳು ಸಹ ಮಕ್ಕಳಿಗೆ ಬಲ ನೀಡುತ್ತವೆ ಎಂದು ಶಿಕ್ಷಕರನ್ನು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಲಿಕಾ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳು ನೃತ್ಯ ಮತ್ತು ತಮ್ಮ ವಿಶೇಷ ಕಲಾ ಪ್ರತಿಭೆಯನ್ನು ಶಾಸಕರ ಮುಂದೆ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಬೆಳಗಾವಿ ತಾಲೂಕಿನ ಶಾಲೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಶಾಲೆಗಳ ಪರವಾಗಿ ಮುಖ್ಯೋಪಾಧ್ಯಾಯರಾದ ಬಿ ಎನ್ ಮಡಿವಾಳರ, ಅಶೋಕ ಖೋತ ಕಿರಣ ಕರಂಬಳಕರ, ಎಸ್. ಕೆ.ನಾಯಕ ರವರು ಶಾಸಕರನ್ನು ಸನ್ಮಾನಿಸಿದರು. ಶಾಸಕರ ವತಿಯಿಂದ ಸರ್ಕಾರಿ ಶಾಲಾ ಮಕ್ಕಳನ್ನು ವಿಮಾನ ಮತ್ತು ರೈಲಿನ ಮೂಲಕ ಉಚಿತ ಪ್ರವಾಸ ಮಾಡಿಸಿದ್ದ ಸೋನಟ್ಟಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಪ್ರಕಾಶ ದೇಯನ್ನವರರವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕಾಕತಿ ಗ್ರಾಮ ಪಂಚಾಯತ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಉಪಾಧ್ಯಕ್ಷೆ ರೇಣುಕಾ ಕೋಳಿ,ಜಂಗಲಿಸಾಬ ನಾಯಿಕ, ಎಸ್ ಡಿ ಎಂ ಸಿ ಅಧ್ಯಕ್ಷೆ ಜಮುನಾ ಕೋಳಿ, ಕೃಷ್ಣಾ ಕುರುಬರ, ಸಿದ್ರಾಯಿ ಸುತಾರ, ಸಿ ಆರ್ ಪಿ ನೀತಾ ಯಲಜಿ,ರಿಜ್ವಾನ್ ನಾವಗೇಕರ,ಶ್ರೀದೇವಿ ಮರಕುಂಬಿ ಸೇರಿದಂತೆ ಕಾಕತಿ ಕ್ಲಸ್ಟರನ ವಿವಿಧ ಶಾಲೆಯ ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಬಿಎನ್ ಮಡಿವಾಳರ ಸ್ವಾಗತಿಸಿದರು ಶಿವಾನಂದ ತಲ್ಲೂರ ನಿರೂಪಿಸಿದರು ಮಹೇಶ ಅಕ್ಕಿ ವಂದಿಸಿದರು.
