ಡಿಸೆಂಬರ್ 27 ಮತ್ತು 28 ರಂದು ಶಹಾಪೂರದಲ್ಲಿರುವ ಸರ್ಕಾರಿ ಚಿಂತಾಮಣ್ ರಾವ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ತಿಳಿಸಿದರು.


ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಶಹಾಪೂರದಲ್ಲಿರುವ ಸರ್ಕಾರಿ ಚಿಂತಾಮಣ್ ರಾವ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕಳೆದ 3 ವರ್ಷದ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಚಾಲನೆ ನೀಡಲಾಗಿತ್ತು. ಈಗ ಡಿಸೆಂಬರ್ 27 ಮತ್ತು 28 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಮೊದಲೂ ಮರಾಠಿ, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿದ್ದ ಶಾಲೆ ಈಗ ದ್ವಿತೀಯ ಪಿಯುಸಿ ವರೆಗೆ ಉನ್ನತಿಯನ್ನು ಪಡೆದಿದೆ. ಸ್ವಾತಂತ್ರ್ಯಪೂರ್ವದಿಂದ 2003ರ ವರೆಗೆ ಬೆಳಗಾವಿಯಲ್ಲಿ ಕೇವಲ ಮೂರೇ ಸರ್ಕಾರಿ ಹೈಸ್ಕೂಲೂಗಳಿವೆ. ಮಹಾಪೌರ ಮಂಗೇಶ್ ಪವಾರ್, ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಉಪಸ್ಥಿತರಿರಲಿದ್ದಾರೆ. ಡಿ.27 ರಂದು ಬೆಳಿಗ್ಗೆ 10.30 ರಿಂದ ಸಂಜೆ 6 ರ ವರೆಗೆ ಹಳೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 28 ರಂದು ಬೆಳಿಗ್ಗೆ 10.30ಕ್ಕೆ ಶಾಲೆಗೆ ತಮ್ಮ ಖಾಸಗಿ ಕಾರ್ಯಾಲಯವನ್ನು ನೀಡಿದ ಸಾಂಗಲಿಯ ಚಿಂತಾಮಣರಾವ್ ಪಟವರ್ಧನ್ ಮಹಾರಾಜರ ಮೂರ್ತಿಯ ಲೋಕಾರ್ಪನೆ ನಡೆಯಲಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ನಗರಸೇವಕ ಗಿರೀಶ್ ಧೋಂಗಡಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
