ಶಾರ್ಟ್ ಸರ್ಕ್ಯೂಟನಿಂದ ದಾಬಾ ಒಂದಕ್ಕೆ ಹೊತ್ತಿದ್ದ ಬೆಂಕಿ ಬಳಿಕ ಪಕ್ಕದ ಲಾರಿ ಡೆಕೋರೇಟ್ ಸಾಮಗ್ರಿ ಮಾರಾಟ ಅಂಗಡಿಗಳಿಗೆ, ಬೆಂಕಿ ವ್ಯಾಪಿಸಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದಿರುವ ಘಟನೆ ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಅದರಗುಂಚಿ ಬಳಿ ಇಂದು ನಡೆದಿದ್ದು, ಪಕ್ಕದಲ್ಲಿ ಪೆಟ್ರೋಲ್ ಬಂಕ್ ಇರುವುದರಿಂದ ಬಾರಿ ಅನಾಹುತವೊಂದು ತಪ್ಪಿದೆ.

ವೈ- ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಅದರಗುಂಚಿ ಬಳಿಯ ರಾಜಸ್ಥಾನ ದಾಬಾದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮೊದಲಿಗೆ ರಾಜಸ್ಥಾನ ದಾಬಾದಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ದಾಬಾ ಪಕ್ಕದ ಲಾರಿ ಡೆಕೋರೇಟ್ ಶಾಪಗಳಿಗೆ ಬೆಂಕಿ ವ್ಯಾಪಿಸಿ ಒಳಗಿನ ಸಾಮಗ್ರಿಗಳು ಸುಟ್ಟುಕರಕಲಾಗಿವೆ. ಇನ್ನೂ ಬೆಂಕಿ ಕಾಣಿಸುತ್ತಿದಂತೆ ಸ್ಥಳೀಯರು ದಾಬಾ ಸಿಬ್ಬಂದಿಗಳು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರು, ಸುಮಾರು ಒಂದು ಗಂಟೆ ಹರಸಾಹಸಪಟ್ಟು ಕೊನೆಗೂ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಗ್ರಾಮೀಣ ಠಾಣೆಯ ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಬೆಂಕಿ ಹೊತ್ತಿಕೊಳ್ಳಲು ಕಾರಣ ಹಾಗೂ ಎಷ್ಟು ಒ್ರಮಾಣ ಹಾನಿಯ ಕುರಿತು ತಿಳಿದು ಬರಬೇಕಾಗಿದೆ.
