ಸರಿಯಾದ ಸಮಯಕ್ಕೆ ಪಿಂಚಣಿಗಳು ಸಂದಾಯವಾಗುತ್ತಿಲ್ಲ,ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ದಲಿತ ಸಂರಕ್ಷ ಸಮಿತಿಯ ರಾಜ್ಯಾಧ್ಯಕ್ಷ ನಾಮದೇವ ಹಿರೇಕೊಡಿ ಮನವಿಯನ್ನು ಮಾಡಿಕೊಂಡರು.

ಅವರು ಚಿಕ್ಕೋಡಿ ಉಪತಹಶಿಲ್ದಾರ ಪರಮಿಳಾ ದೇಶಪಾಂಡೆಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. 2012 ರಿಂದಲೂ ಪಿಂಚಣಿ ಸಾರ್ವತ್ರಿಕರಣ ಮಾಡಬೇಕೆಂಬ ವಿಶಾಲ ಉದ್ದೇಶ ಮತ್ತು ದೃಷ್ಟಿಕೋನವನ್ನು ಹೊಂದಿದ್ದು, ಜನಸಮುದಾಯದಲ್ಲಿ ಕರ್ನಾಟಕ ರಾಜ್ಯದ 15 ಜಿಲ್ಲೆಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ 98 ವಾರ್ಡುಗಳಲ್ಲಿ 184 ಸ್ಲಂಗಳಲ್ಲಿ ಪಿಂಚಣಿ ಪಡೆದುಕೊಳ್ಳುವ ವಿಷಯದಲ್ಲಿ ಸಮುದಾಯದವರಿಗೆ ಅರಿವು ಮತ್ತು ಜಾಗೃತಿ ಮೂಡಿಸುತ್ತಾ ಸಹಕಾರ ಕೊಡುತ್ತಿದ್ದೇವೆ.ನಗರದ ಕಟ್ಟಿದ ಕಾರ್ಮಿಕರು ಹಾಗೂ ನಗರ ವಂಚಿತ ಸಮುದಾಯದ ಜನರ ಜೊತೆ ಪಿಂಚಣಿ ಪಡೆದುಕೊಳ್ಳಲು ಸಂಘಟನೆ ಕೆಲಸ ಮಾಡುತ್ತಾ ಬರುತ್ತಿದೆ.
ಪಿಂಚಣಿಗೆ ಸಂಬಂಧಿಸಿದ ಬಹತೇಕ ಇಲಾಖೆಗಳು ಅರ್ಹ ಪಿಂಚಣಿದಾರರ ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಉದಾಸೀನತೆ, ನಿರ್ಲಕ್ಷ ತಾಂತ್ರಿಕ ದೋಷಪೂರಿತ ಸಮಸ್ಯೆಗಳನ್ನು ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಮತ್ತು ನೆಟ್ವರ್ಕ್ ಸಮಸ್ಯೆಗಳ ನೆಪವೊಡ್ಡಿ ಕಳೆದ ಜೂಲೈ 2025 ರಿಂದ ಡಿಸೆಂಬರ್ 20, 2025 ರವರೆಗೆ ಪಿಂಚಣಿದಾರರಿಗೆ ರೂ.32,000/- ಆದಾಯ ಮಿತಿಯನ್ನು ನಿಗದಿಪಡಿಸಿ ಅದನ್ನು ಮಾನದಂಡವಾಗಿ ಮಾಡಿ ಅರ್ಹ ಪಿಂಚಣಿದಾರರಿಗೆ ಪಿಂಚಣಿ ಕೊಡದಂತೆ ವಿಫಲರಾಗಿದ್ದಾರೆ.ಈ ಎಲ್ಲಾ ಪ್ರಾಯೋಗಿಕ ಅಂಶಗಳನ್ನು ನಾವು ಅನುಭವಿಸುತ್ತಲೇ ಇದ್ದೇವೆ.ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಇಲ್ಲದಾಗಿದೆ. ಈ ಸಮಸ್ಯೆಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಲು ಪತ್ರ ಕೊಟ್ಟು ಒಂದು ವರ್ಷವಾಗಿದ್ದರೂ ವಿವಿದ ಇಲಾಖೆಯ ಅಧಿಕಾರಿ ವರ್ಗದವರಿಂದ ಇಲ್ಲಿಯವರೆಗೆ ಪ್ರತಿಕ್ರಿಯೆ ಬಂದಿರುವುದಿಲ್ಲ.ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮನವಿಯನ್ನು ಮಾಡಿಕೊಂಡರು.
ಈ ಸಂದರ್ಭದಲ್ಲಿ ಆನಂದ ಅರಬಳೆ,ಸುಧಾ ನಾಗರೇಶಿ,ವರ್ಷಿಣಿ ಕಾಂಬಳೆ,ಐಶ್ವರ್ಯ ಸನದಿ,ವಿಕ್ರಮ ಹಾವಪ್ಪಗೋಳ,ಪೂಜಾ ಮಾನೆ,ದೀಪಾ ಶೆಟ್ಟಪ್ಪಗೊಳ,ವರ್ಷಾ ಕಾಂಬಳೆ,ಸುಪ್ರೀಯಾ ಉಮರಾಣಿ,ವಸುಂಧಾ ದೊಡ್ಡಮನಿ ಉಪಸ್ಥಿತರಿದ್ದರು.
