ಕೆಲವು ತಿಂಗಳುಗಳ ಹಿಂದೆ ಸುರಿದ ಭೀಕರ ಮಳೆಗೆ ಹಾನಿಯಾಗಿರುವ ರೈತರ ಬೆಳೆ ಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ಇಂದು ನಾವಲಗಟ್ಟಿ ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭೀಕರ ಮಳೆಯಿಂದ ಹಾನಿಯಾದ ರೈತರ ಜಮೀನುಗಳನ್ನು ಸರ್ವೆ ನಡೆಸಿರುವ ಕೃಷಿ ಇಲಾಖೆ ಮೂರು ತಿಂಗಳು ಕಳೆದರೂ ಇಲ್ಲಿಯವರೆಗೆ ಬೆಳೆ ಪರಿಹಾರ ನೀಡಿಲ್ಲ. ಕೂಡಲೇ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ರೈತರ ಬೆಳೆಗೆ ಪರಿಹಾರ ಕೊಡಬೇಕಿದ್ದ ಸರ್ಕಾರ ಒಬ್ಬರಿಗೆ ಕೊಡುವುದು ಒಬ್ಬರಿಗೆ ಬಿಡುವುದು ಎಂಬಂತೆ ಮಾಡುತ್ತಿದೆ, ರೈತರಿಗೆ ತಾರತಮ್ಯ ಮಾಡುತ್ತಿರುವಂತಹ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಯಾಗಿರಬಹುದು ಸರ್ಕಲ್,ಹಾಗೂ ತಹಶಿಲ್ದಾರ ಇವರು ರೈತರಿಗೆ ತಾರತಮ್ಯ ಮಾಡುವುದರಿಂದ ಬಹಳಷ್ಟು ಅನ್ಯಾಯವಾಗಿದೆ ಅದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ಜಿಲ್ಲಾಧಿಕಾರಿಗಳು ತಕ್ಷಣ ಎಲ್ಲ ರೈತರಿಗೆ ಪರಿಹಾರ ಧನವನ್ನು ಘೋಷಣೆ ಮಾಡದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ . ಎಂದು ಹೇಳಿದರು .
ತಾಲೂಕಾ ಆಡಳಿತದ ನಿರ್ಲಕ್ಷ್ಯದಿಂದ ಈ ರೈತರಿಗೆ ತಾರತಮ್ಯ ಆಗ್ತಾ ಇದೆ ಅದಕ್ಕಾಗಿ ನಾವು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದೇವೆ ಅವರೂ ಕೂಡ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಬೆಳೆ ಪರಿಹಾರವನ್ನು ಕೊಡದೇ ಹೋದರೆ ಪ್ರತೀ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡುತ್ತೇವೆ. 2025-26ನೇ ಸಾಲಿನ ಮುಂಗಾರು ಬೆಳೆ ಹಾನಿಯ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುವ ಮೂಲಕ ನೊಂದ ರೈತರ ಕೈಹಿಡಿಯಬೇಕು ಎಂದು ಗ್ರಾಮದ ರೈತರು ಮನವಿ ಸಲ್ಲಿಸಿದ್ದಾರೆ.
ಒಂದು ವೇಳೆ ಶೀಘ್ರವೇ ಪರಿಹಾರ ಹಣ ಬಾರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮರಕಟ್ಟೆ ಭಾಗದ ರೈತರು ಎಚ್ಚರಿಕೆ ನೀಡಿದ್ದಾರೆ.
