BELAGAVI

ವಾರಸುದಾರರಿಲ್ಲದ ವೃದ್ಧನ ಶವಕ್ಕೆ ಮಾಜಿ ಮೇಯರ್ ವಿಜಯ ಮೋರೆ ಮಾನವೀಯ ಆಸರೆ..

Share

ಬೆಳಗಾವಿಯ ಮಿಲೇನಿಯಂ ಗಾರ್ಡನ್ ಮುಂದೆ ಕಳೆದ ಕೆಲ ದಿನಗಳಿಂದ ಆಶ್ರಯ ಪಡೆದಿದ್ದ ಅಪರಿಚಿತ ವೃದ್ಧರೊಬ್ಬರು ಇಂದು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಾಜಿ ಮೇಯರ್ ವಿಜಯ ಮೋರೆ ಮತ್ತು ತಂಡ, ಮೃತರ ಶವವನ್ನು ಗೌರವಯುತವಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಮಿಲೇನಿಯಂ ಗಾರ್ಡನ್ ಬಳಿ ವೃದ್ಧರೊಬ್ಬರು ಕಳೆದ ಕೆಲವು ದಿನಗಳಿಂದ ಕುಳಿತಿದ್ದರು. ಆದರೆ ತೀವ್ರ ಚಳಿ ಮತ್ತು ವಯೋಸಹಜ ಕಾಯಿಲೆಯಿಂದಾಗಿ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತ ಸಂತೋಷ್ ದಾರೇಕರ್ ಅವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಾಜಿ ಮೇಯರ್ ವಿಜಯ ಮೋರೆ, ತಕ್ಷಣವೇ ಶವವಾಹನ ವ್ಯವಸ್ಥೆ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಟಿಳಕವಾಡಿ ಪೊಲೀಸ್ ಠಾಣೆಯ ಸಿಪಿಐ ಪೂಜಾರಿ ಅವರು ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದರು. ಬಳಿಕ ಕಾರ್ಪೊರೇಟರ್ ನಿತಿನ್ ಜಾಧವ್, ಪದ್ಮಪ್ರಸಾದ್ ಹುಲಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ವೃದ್ಧನ ಶವವನ್ನು ಸಿವಿಲ್ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಗೆ ಸ್ಥಳಾಂತರಿಸಲಾಯಿತು. ಅನಾಥ ಶವಕ್ಕೆ ಗೌರವಯುತ ವಿದಾಯ ನೀಡಲು ಶ್ರಮಿಸಿದ ಈ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Tags:

error: Content is protected !!