BELAGAVI

ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಿಂದ “ವಿಶ್ವ ಧ್ಯಾನ ದಿನ”

Share

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಅನಗೋಳ ಶಾಖೆಯಲ್ಲಿ ವಿಶ್ವ ಧ್ಯಾನ ದಿನ ಆಚರಿಸಲಾಯಿತು.

ದೀಪ ಬೆಳಗಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀಮಾನ. ಎ. ಎಸ್. ಪಾಶ್ಚಾಪುರೆ ಅವರು ಧ್ಯಾನವು ವ್ಯಕ್ತಿಯ ವರ್ತನೆಯನ್ನು ಶಾಂತ ಉತ್ತಮ ದಿವ್ಯ ಹಾಗೂ ಶ್ರೇಷ್ಠವಾಗಿಸಿ ಸಂಬAಧಗಳಲ್ಲಿ ಸುಧಾರಣೆ ತರುತ್ತದೆ. ಮನಸ್ಸಿನ ಮಲಿನತೆಯನ್ನು ದೂರ ಮಾಡುತ್ತದೆ ಎಂದರು.

ಅಖಿಲ ಭಾರತ ಹಿರಿಯ ನಾಗರಿಕರ ಸಂಘಟನೆಯ ಉಪಾಧ್ಯಕ್ಷರಾದ ಮಹಾಂತೇಶ ಹಿರೇಮಠ ಅವರು ಮಾತನಾಡುತ್ತಾ ರಾಜಯೋಗ ಧ್ಯಾನವು ಮನಸ್ಸಿಗೆ ಆಂತರಿಕ ಶಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ ಹಾಗೂ ಮುಳ್ಳಿನ ತರ ಇದ್ದ ಜೀವನವನ್ನು ಹೂವಿನ ತರಹ ಪರಿವರ್ತನೆ ಮಾಡುತ್ತದೆ. ಎಂದರು.

ಹ್ಯಾಪಿಥಾಟ್ಸ ಬೆಳಗಾವಿ ಕೋಆರ್ಡಿನೇಟರ ಶ್ರೀಮತಿ ಛಾಯಾ ಶಿಂದೆ ಮಾತನಾಡುತ್ತಾ ವರ್ತಮಾನ ಸಮಯದಲ್ಲಿ ಧ್ಯಾನದ ಕೊರತೆಯಿಂದಾಗಿ ಮಾನಸಿಕವಾಗಿ ದುಃಖ ಅನುಭವಿಸುವಂತಾಗಿದೆ, ಸುಖಮಯ ಜೀವನಕ್ಕಾಗಿ ಧ್ಯಾನವನ್ನು ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಂದೆ ತಾಯಿಗಳು ಮಕ್ಕಳ ಕೈಯಲ್ಲಿ ಮೋಬೈಲ್ ಬದಲಾಗಿ ಧ್ಯಾನ ಹಾಗೂ ಅಧ್ಯಾತ್ಮಿಕತೆಯ ಸಂಸ್ಕಾರವನ್ನು ತುಂಬಬೇಕಾಗಿದೆ. ಎಂದರು.
ಬ್ರಹ್ಮಾಕುಮಾರೀಸ್ ಉಪವಲಯ ಬೆಳಗಾವಿ ಸಂಚಾಲಕರಾದ ಆಧರಣೀಯ ರಾಜಯೋಗಿನಿ ಬಿ. ಕೆ. ಅಂಬಿಕಾ ಅಕ್ಕನವರು ವಿಶ್ವ ಧ್ಯಾನ ದಿನ ಕುರಿತು ಮಾತನಾಡುತ್ತಾ ರಾಜಯೋಗ ಧ್ಯಾನವು ಕೇವಲ ವ್ಯಕ್ತಿಗತ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಸಮಾಜ ಮತ್ತು ಸಮುದಾಯದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಸಮತೋಲನವನ್ನು ತರುತ್ತದೆ. ಸಹಜ ರಾಜ ಯೋಗ ಧ್ಯಾನದ ಮೂಲಕ ನಾವು ನಮ್ಮ ಆಂತರಿಕ ಶಕ್ತಿಗಳನ್ನು ಜಾಗೃತಗೊಳಿಸಬಹುದು, ಇದರಿಂದ ನಮ್ಮ ಜೀವನ ಆರೋಗ್ಯಕರ ಹಾಗೂ ಸಮತೋಲನವಾಗುತ್ತದೆ. ಜೊತೆಗೆ ಶಾಂತಿಪೂರ್ಣ ಮತ್ತು ಶೇಷ್ಠ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ರಾಜಯೋಗಿನಿ ಬಿ. ಕೆ. ವಿದ್ಯಾ ಅಕ್ಕನವರು ಸ್ವಾಗಿತಿಸಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಬಿಕೆ ಮಹಾದೇವಿ ಅಕ್ಕನವರು, ಬಿಕೆ ಸುಲೋನಾ, ಬಿಕೆ ಮೀನಾಕ್ಷಿ, ಬಿಕೆ ಶಿವಲೀಲಾ, ಬಿಕೆ ಶೋಭಾ, ಬಿಕೆ ರೂಪಾ, ಬಿಕೆ ಪಾರ್ವತಿ, ಬಿಕೆ ಅನೀತಾ, ಬಿಕೆ ಸಾಧನಾ, ಬಿಕೆ ಸಂಪತ್ತಿ, ಬಿಕೆ ಶೀತಲ, ಬಿಕೆ ಅಂಬರಸೇಟ, ಬಿಕೆ ದೀಪಕ, ಬಿಕೆ ದತ್ತಾತ್ರೇಯ, ಬಿಕೆ ಮನೋಹರ, ಬಿಕೆ ಹರೀಶ (ಮಸ್ಕಟ), ಬಿಕೆ ಕೃಷ್ಣಮೂರ್ತಿ, ಬಿಕೆ ರಾಜಮನೆ ಮುಂತಾದವದು ಉಪಸ್ಥಿತರಿದ್ದರು.

Tags:

error: Content is protected !!