ರಾಜ್ಯ ಸರ್ಕಾರದಲ್ಲಿ ಹಣಕಾಸು ನಿರ್ವಹಣೆ ಆಗುತ್ತಿಲ್ಲ. ಗ್ಯಾರಂಟಿ ಯೋಜನೆ ನಿರ್ವಹಣೆ ಹೇಗೆ ಮಾಡಬೇಕು ಅನ್ನೋದು ಅವರಿಗೆ ಪ್ರಶ್ನೆ ಆಗಿದೆ. ಗೃಹ ಲಕ್ಷ್ಮೀ ಹಣ ಹೊಂದಿಸಲು ಆಗದೇ ಇರದೇ ಇದ್ದಾಗ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಫೆಬ್ರುವರಿ, ಮಾರ್ಚ್ ತಿಂಗಳು ಬಿಟ್ಟು ಮುಂದಿನ ತಿಂಗಳದ್ದು ಹಾಕಲು ಬರಲ್ಲ. ಎರಡು ತಿಂಗಳು ಬಿಟ್ಟು ಹಣ ಕೊಡುತ್ತೇವೆ ಎಂದು ಹೇಳಲು ಬರಲ್ಲ.ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಲೆಕ್ಕ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು. ಗೃಹ ಲಕ್ಷ್ಮಿ ಯೋಜನೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೆಬ್ಬಾಳ್ಕರ್ ಅವರಿಗೆ ಗೊತ್ತಾಗುತ್ತಿಲ್ಲ ಹೀಗಾಗಿ ಡಿಕೆ ಶಿವಕುಮಾರ್ ಹೆಲ್ಫ್ ಮಾಡಲಿ, ಸಿದ್ದರಾಮಯ್ಯ ಹೆಲ್ಪ್ ಮಾಡಲಿ ಗೃಹಲಕ್ಷ್ಮಿ ವಿಚಾರಕ್ಕೆ ಶ್ವೇತ ಪತ್ರ ಹೊರಡಿಸಲಿ ಎಂದರು. ಬಿಳಿ ಹಾಳೆ ಮೇಲೆ ಎಷ್ಟು ಕಂತು ಕೊಟ್ಟಿದ್ದೇವೆ ಎಷ್ಟು ಹಣ ಕೊಟ್ಟಿದ್ದೇವೆ ಹೇಳಲಿ. ಹಿಂದಿನ ಬಜೆಟ್ ನಲ್ಲಿ ಮೀಸಲಿಟ್ಟ ಹಣ ಲ್ಯಾಪ್ಸ್ ಆಗುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಕನ್ಫ್ಯೂಷಿಯಸ್ ನಲ್ಲಿದಾರೆ ಸಿದ್ದರಾಮಯ್ಯ ಅವರು ಸರಿ ಮಾಡಲಿ ಎಂದರು.
ರಾಜ್ಯ ನಾಯಕರಿಗೆ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂಬ ಖರ್ಗೆ ಹೇಳಿಕೆ ವಿಚಾರಕ್ಕೆ ಉತ್ತರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಸಮಸ್ಯೆ ಇದೆ ಎಂದು ಒಪ್ಪಿಕೊಂಡಿದ್ದಾರೆ.ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲಾ ಅಂತಾ ಸಿಎಂ, ಡಿಸಿಎಂ ಹೇಳುತ್ತಾರೆ. ನಿಮ್ಮಲ್ಲಿ ಗೊಂದಲ ಇಲ್ಲಾ ಅಂದ ಮೇಲೆ ಸಮಸ್ಯೆ ಬಗೆ ಹರಿಸಿಕೊಳ್ಳಿ ಅಂತಾ ಯಾಕೆ ಹೇಳಿದರು. ಸಿದ್ದರಾಮಯ್ಯ ಅವರು ಕೂಡ ನಾನೇ ಸಿಎಂ ಅಂತಾ ಗಟ್ಟಿಯಾಗಿ ಹೇಳುತ್ತಿಲ್ಲ. ಇಬ್ಬರ ನಡುವೆ ಎನೋ ಒಂದು ಒಪ್ಪಂದ ಆಗಿದೆ. ಹೀಗಾಗಿ ಐದು ವರ್ಷ ನಾನೇ ಸಿಎಂ ಅಂತಾ ಸಿದ್ದರಾಮಯ್ಯ ಹೇಳುತ್ತಿಲ್ಲ ಎಂದರು. ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಒಪ್ಪಂದ ಆಗಿದೆ. ಕೂಡಲೇ ಎಲ್ಲವನ್ನೂ ಸರಿ ಮಾಡಿ ಯಾರು ಮುಂದುವರೆಬೇಕು ಅಂತಾ ಹೇಳಿ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ.ಜನರನ್ನ ಕತ್ತಲೆ ಯಲ್ಲಿ ಇಡುವ ಕೆಲಸ ನಿಲ್ಲಿಸಬೇಕು ಎಂದರು.
