ಬಾಗಲಕೋಟೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಅತ್ಯಾಧುನಿಕ ಐಟಿಎಂಎಸ್ (ITMS) ಯೋಜನೆಯಡಿ ನಿಯಮ ಮುರಿದ ಸವಾರರಿಂದ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಮೀಪದ ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದ್ದು, ನಿಯಮ ಉಲ್ಲಂಘನೆ ಮಾಡುವವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.


ಬಾಗಲಕೋಟೆ ನಗರದ ಹಳೇ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ವೃತ್ತಗಳಲ್ಲಿ ಅಳವಡಿಸಲಾಗಿರುವ ಹೈಟೆಕ್ ಕ್ಯಾಮೆರಾಗಳು ಈಗ ಸವಾರರ ಜೇಬಿಗೆ ಕತ್ತರಿ ಹಾಕುತ್ತಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಪಿ. ಸಿದ್ದಾರ್ಥ ಗೋಯಲ್ ಸಂಚಾರಿ ನಿಯಮ ಉಲ್ಲಂಘಿಸಿದರೆ ಸ್ವಯಂಪ್ರೇರಿತವಾಗಿ ದಂಡ ವಿಧಿಸುವ ಐಟಿಎಂಎಸ್ ವ್ಯವಸ್ಥೆಯಡಿ ಪೊಲೀಸರು ಒಟ್ಟು 86 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದರು. ಹೆಲ್ಮೆಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್ ಮತ್ತು ಚಾಲನೆ ವೇಳೆ ಮೊಬೈಲ್ ಬಳಕೆಯಂತಹ ನಿಯಮ ಬಾಹಿರ ಕೃತ್ಯಗಳ ಫೋಟೋ ಸಮೇತ ಸವಾರರ ಮೊಬೈಲ್’ಗೆ ದಂಡದ ಮಾಹಿತಿ ಕಳುಹಿಸಲಾಗಿತ್ತು. ಇತ್ತೀಚೆಗೆ ಸರ್ಕಾರ ನೀಡಿದ್ದ ಶೇಕಡಾ 50 ರಷ್ಟು ರಿಯಾಯಿತಿಯ ಸದುಪಯೋಗ ಪಡೆದ ಸವಾರರು, ಒಟ್ಟು 98 ಲಕ್ಷದ 71 ಸಾವಿರದ 70 ರೂಪಾಯಿ ದಂಡವನ್ನು ಪಾವತಿಸಿದ್ದಾರೆ.ಎಂದು ಹೇಳಿದರು .
