ಆತ ಹರಿಯಾಣ ಮೂಲದವನು. ಕಲಿತಿದ್ದು ಕಡಿಮೆ ಆದರೂ ದೇಶಕ್ಕಾಗಿ ಯೋಚಿಸುವುದು ಹೆಚ್ಚು. ಈ ಹಿನ್ನೆಲೆ ಪ್ರತಿದಿನ 120 ಕಿಲೋ ಮೀಟರ್ ಸೈಕಲ್ ಮೂಲಕ ಕ್ರಮಿಸುತ್ತ ಸಾಗುವ ಈತ ಯುವಕರಿಗೆ ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಸಂದೇಶ ನೀಡುತ್ತಿದ್ದಾನೆ.

ಹೌದು, ಹರಿಯಾಣಾ ಮೂಲದ ಮಹೇಶ್ ವರ್ಮಾ ಎಂದು ಯುವಕ ಸೈಕಲ್ ಮೂಲಕ ದೇಶ ಸುತ್ತಿ, ವ್ಯಸನ ಮುಕ್ತ ಸಮಾಜ ನಿರ್ಮಾಣ, ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಮತ್ತು ವಿಶ್ವಕಲ್ಯಾಣಕ್ಕಾಗಿ ಸಂದೇಶವನ್ನು ನೀಡುತ್ತಿದ್ದಾನೆ. ಇಂದು ಈತನ ಸೈಕಲ್ ಯಾತ್ರೆ ಬೆಳಗಾವಿಗೆ ತಲುಪಿತು.
3 ತಿಂಗಳಿನಿಂದ ತಮ್ಮ ಯಾತ್ರೆ ಆರಂಭಗೊಂಡಿದ್ದು, ಪ್ರತಿದಿನ ಸುಮಾರು 120 ಕಿಲೋ ಮೀಟರ್ ಕ್ರಮಿಸಲಾಗುತ್ತದೆ. ದೇಶವನ್ನು ಸುತ್ತಿ ನೋಡುವ ವಿಚಾರ ಚಿಕ್ಕಂದಿನಿಂದಲೂ ಇತ್ತು. ಸೋಷಿಯಲ್ ಮಿಡೀಯಾದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳು ಕೂಡ ಬೆಳಕಿಗೆ ಬರುತ್ತವೆ. ಇವುಗಳ ಸತ್ಯಾಸತ್ಯೆಯನ್ನು ಈ ಯಾತ್ರೆಯ ಮೂಲಕ ನೋಡಬಹುದಾಗಿದೆ. ಯುವಕರು ವ್ಯಸನಕ್ಕೊಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲೂ, ನಿಜವಾದ ಜ್ಞಾನವನ್ನು ಪಡೆಯಬೇಕಾದರೇ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಬೇಡವಾದ ವಿಚಾರಗಳನ್ನು ಬೆಳೆಸಿಕೊಳ್ಳದೇ, ತಮ್ಮ ಗುರಿಯನ್ನು ಮುಟ್ಟಲೂ ಪ್ರಾಮಾಣಿಕವಾಗಿ ಶ್ರಮವಹಿಸಬೇಕು ಎಂದರು.
ಈಗಾಗಲೇ 12ರ ಪೈಕಿ 7 ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದಾನೆ. ಈಗ ಕಾಶಿ ವಿಶ್ವನಾಥ್, ಅಯೋಧ್ಯಾ ರಾಮಮಂದಿರ, ಉತ್ತರಾಖಂಡ, ಕೇದಾರನಾಥ್, ಬದ್ರಿನಾಥ್, ಜಮ್ಮುಕಾಶ್ಮೀರ, ಮಾತಾ ವೈಷ್ಣೋದೇವಿ, ಅಮರಾನಾಥ್, ಹಿಮಾಚಲದ 4 ಕೈಲಾಶ, ಪಂಜಾಬ್, ಹರಿಯಾಣಾ, ಮಾನಸ ಸರೋವರಕ್ಕೆ ತಲುಪಲಿದ್ದಾನೆ
