BELAGAVI

ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕನ್ನಡ ಗಡಿ ತಿಲಕ ಹಾಗೂ ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ ಪ್ರದಾನ

Share

ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯೋತ್ಸವ, ಕನ್ನಡ ಗಡಿ ತಿಲಕ ಹಾಗೂ ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉತ್ಸಾಹದಲ್ಲಿ ನಡೆಯಿತು.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯೋತ್ಸವ, ಕನ್ನಡ ಗಡಿ ತಿಲಕ ಹಾಗೂ ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉತ್ಸಾಹದಲ್ಲಿ ನಡೆಯಿತು. ಡಾ. ಸಾಹಿತಿ ಡಾ. ರಾಮಕೃಷ್ಣ ಮರಾಠೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೋ. ಡಾ. ಬಸವರಾಜ್ ಜಗಜಂಪಿ ಉಪಸ್ಥಿತರಿದ್ಧರು.
ಈ ವೇಳೆ ಮಾತನಾಡಿದ ಮುಖ್ಯ ಅತಿಥಿಗಳಾಗಿ ಪ್ರೋ. ಡಾ. ಬಸವರಾಜ್ ಜಗಜಂಪಿ ಅವರು, ಸಾಹಿತಿಗಳಾದ ತುರಮುರಿ, ಇಂಚಲ ಮತ್ತು ಸನದಿ ಅವರು ಕನ್ನಡ ಸಾಹಿತ್ಯ ಕೃಷಿಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದವರು. ಶಿರೀಷ್ ಜೋಶಿ ಅವರನ್ನು ಕಾಣದೆಯೇ ಅವರನ್ನು ತುರಮುರಿ ಅವರ ಸಾಹಿತ್ಯದಿಂದ ಕಂಡೆ. ಪ್ರತಿಷ್ಠಾನವು ಬೆಳಗಾವಿಯಲ್ಲಿ ಸಕ್ರಿಯವಾಗಿದೆ. ನಾಡೋಜ್ ಬಿ.ಎ. ಸನದಿ ಅವರು ಓರ್ವ ಮಾದರಿ ಸಾಹಿತಿ ಎಂದರು.

ರಂಗಕರ್ಮಿ ಶಿರೀಷ್ ಜೋಷಿ ಅವರಿಗೆ ಕನ್ನಡ ಗಡಿ ತಿಲಕ ಪ್ರಶ್ತಿ, ಉದಯೋನ್ಮುಖ ಕವಿ ಶಶಿ ತರೀಕೆರೆ ಅವರಿಗೆ ಜನ್ನಾ ಸನದಿ ಸಾಹಿತ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಬಸವರಾಜ್ ಗಾರ್ತಿ, ಎ.ಎ. ಸನದಿ, ಸಿ.ಎಂ. ಬೂದಿಹಾಳ, ಪ್ರೋ. ಬಿ.ಎಫ್. ಕಲ್ಲಣ್ಣವರ ಇನ್ನುಳಿದವರು ಶ್ರಮಿಸಿದರು.

Tags:

error: Content is protected !!