ಬೆಳಗಾವಿ ಜಿಲ್ಲಾಧಿಕಾರಿಗಳು ಸಂಸದರ ಹಕ್ಕುಚ್ಯುತಿ ಮಾಡಿದ್ದಾರೆಂದು ಲೋಕಸಭಾ ಸಭಾಪತಿಗಳಿಗೆ ದೂರು ನೀಡಿದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಧೈರ್ಯಶೀಲ್ ಮಾನೆ ವಿರುದ್ಧ ಬೆಳಗಾವಿಯಲ್ಲಿಂದು ಕರವೇ ನಾರಾಯಣಗೌಡ ಬಣದ ವತಿಯಿಂದ ಅಣುಕು ಶವಯಾತ್ರೆ ನಡೆಸಿ, ಪ್ರತಿಭಟನೆ ನಡೆಸಲಾಯಿತು. ಧೈರ್ಯಶೀಲ್ ಮಾನೆ ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಬೇಕೆಂದು ಆಗ್ರಹಿಸಲಾಯಿತು.


ಬೆಳಗಾವಿ ಜಿಲ್ಲಾಧಿಕಾರಿಗಳು ಸಂಸದರ ಹಕ್ಕುಚ್ಯುತಿ ಮಾಡಿದ್ದಾರೆಂದು ಲೋಕಸಭಾ ಸಭಾಪತಿಗಳಿಗೆ ದೂರು ನೀಡಿದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಧೈರ್ಯಶೀಲ್ ಮಾನೆ ವಿರುದ್ಧ ಬೆಳಗಾವಿಯಲ್ಲಿಂದು ಕರವೇ ನಾರಾಯಣಗೌಡ ಬಣದ ವತಿಯಿಂದ ಅಣುಕು ಶವಯಾತ್ರೆ ನಡೆಸಿ, ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಹಾರಾಷ್ಟ್ರದ ಸಂಸದರಾದ ಧೈರ್ಯಶೀಲ್ ಮಾನೆ ಅವರು ಲೋಕಸಭೆಯ ಸಭಾಪತಿಗಳಿಗೆ ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ನೀಡಿದ ದೂರನ್ನು ಖಂಡಿಸಿದರು. ಸಂಸದರಾಗಿ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಆಲಿಸುವ ಬದಲೂ ಬೆಳಗಾವಿಗೆ ಬಂದು ಭಾಷಾ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಮೊದಲೂ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ, ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು. ಮಹಾರಾಷ್ಟ್ರದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಲ್ಲಿನ ಜನಪ್ರತಿನಿಧಿಗಳು ಗಡಿವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಬೆಳಗಾವಿ ಮೂಲಕವೇ ಅವರು ದೆಹಲಿಗೆ ಹೋಗಬೇಕಾಗಿದ್ದು, ಎಚ್ಚೆತ್ತುಕೊಂಡು ತಮ್ಮ ಕೆಲಸವನ್ನು ಮಾಡಿ. ಕರ್ನಾಟಕದ 28 ಸಂಸದರು ಪಕ್ಷಾತೀತವಾಗಿ ಲೋಕಸಭೆಯ ಸಭಾಪತಿಗಳಿಗೆ ಮನವಿ ಮಾಡಬೇಕು. ಧೈರ್ಯಶೀಲ್ ಮಾನೆ ಅವರನ್ನು ಮಾನಸೀಕ ಆಸ್ಪತ್ರೆಗೆ ಸೇರಿಬೇಕೆಂದು ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ನಾರಾಯಣಗೌಡ ಬಣದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
