BELAGAVI

ಬೆಳಗಾವಿಯಲ್ಲಿ ಉತ್ಸಾಹದಲ್ಲಿ ನಡೆದ 6ನೇ ರಾಷ್ಟ್ರೀಯ ಕರಾಟೆ ಸ್ಪರ್ಧೆ

Share

ಬೆಳಗಾವಿ ಜಿಲ್ಲಾ ಸ್ಫೋರ್ಟ್ ಕರಾಟೆ ಅಸೋಸಿಯೇಷನ್’ನ ವತಿಯಿಂದ 6ನೇ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು.

ಬೆಳಗಾವಿ ನೆಹರು ನಗರದ ಬೆಳಗಾವಿ ಜಿಲ್ಲಾ ಸ್ಫೋರ್ಟ್ ಕರಾಟೆ ಅಸೋಸಿಯೇಷನ್’ನ ವತಿಯಿಂದ 6ನೇ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು. ವಿವಿಧ ಗಣ್ಯರು ಈ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.

ಸುಮಾರು 1400 ಹುಡುಗರು ಇದರಲ್ಲಿ ಭಾಗವಹಿಸಿದ್ದರು. ಇವತ್ತು 14 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ಕರಾಟೆ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ವಿಜೇತರಾದ ಮಕ್ಕಳಿಗೆ ಮೆಡಲ್ ಮತ್ತು ಬಹುಮಾನ ಪ್ರಮಾಣಪತ್ರಗಳನ್ನು ಕೊಡ್ತಾ ಇದ್ದೇವೆ. ಈ ಒಂದು ಸ್ಪರ್ಧೆಗೆ ವಿವಿಧ ರಾಜ್ಯದ ಕರಾಟೆ ಸ್ಪರ್ಧಾರ್ಥಿಗಳು ಕೂಡಾ ಬಂದಿದ್ದಾರೆ ಹರಿಯಾಣ ಪಂಜಾಬ ಯು.ಪಿ ಮಹಾರಾಷ್ಟ್ರ ಇನ್ನೂ ಹಲವಾರು ಟೀಮ್’ಗಳು ಬಂದಿದ್ದಾವೆ ಅವರಿಗೆಲ್ಲ ಒಂದು ಸೂಚನೆಯನ್ನು ಕೊಡುತ್ತೇವೆ ಈ ಮಕ್ಕಳೆಲ್ಲ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋಗಬೇಕು .ಈಗಾಗಲೇ ನಮ್ಮ ಹೆಮ್ಮಯ ಬೆಳಗಾವಿಯ 2 ಮಕ್ಕಳು ಈ ಸಾಧನೆಯನ್ನು ಮಾಡಿದ್ದಾರೆ ಅದಕ್ಕಾಗಿ ಮಕ್ಕಳಿಗೆ ಹೊಸ ಹೊಸ ಆಟಗಳನ್ನು ಅವುಗಳ ಸೂಚನೆಗಳನ್ನು ತಿಳಿಸಿ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಉದ್ದೇಶದಿಂದ ನಾವು ಪ್ರತಿವರ್ಷ ಈ ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಎಂದು ಗಜೇಂದ್ರ ಕಾಕತೀಕರ ತಿಳಿಸಿದರು.

ಇನ್ನು ಕಾರ್ಯದರ್ಶಿ ಜೀತೇಂದ್ರ ಕಾಕತೀಕರ ಅವರು, 6ನೇ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ 1300 ಮಕ್ಕಳು ದೇಶದ ವಿವಿಧೆಡೆಯಿಂದ ಕರಾಟೆ ಪಟು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಗೆದ್ದವರಿಗೆ ಪದಕ, ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಚಾಂಪಿಯನ್ ಆಫ್ ಚಾಂಪಿಯನ್ ಗೆದ್ದವರಿಗೆ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತಿದೆ ಎಂದರು.

Tags:

error: Content is protected !!