Kagawad

ಕಾಗವಾಡ ತಾಲೂಕಿನ ಉಗಾರದಲ್ಲಿ ಶಾಸಕ ರಾಜು ಕಾಗೆ ಇವರಿಂದ ಪೋಲಿಯೋ ಲಸಿಕೆ ಹಾಕಿ ಚಾಲನೆ ನೀಡಿದರು.

Share

ಪೋಲಿಯೋ ಮುಕ್ತ ಭಾರತ ದೇಶ ನಿರ್ಮಿಸಲು ಹಮ್ಮಿಕೊಂಡ ಬಾಲಕರಿಗೆ ಪೋಲಿವೋ ಲಿಸಿಕೆ ಹಾಕುವ ಕಾರ್ಯಕ್ರಮ ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ನಮ್ಮ ಕ್ಲಿನಿಕ್ ದಲ್ಲಿ ಬಾಲಕರಿಗೆ ಪೋಲಿಯೋ ಲಸಿಕೆ ಶಾಸಕರ ರಾಜು ಕಾಗೆ ನೀಡಿ ಚಾಲನೆ ನೀಡಿದರು.

ರವಿವಾರ ಬೆಳಿಗ್ಗೆ ಉಗಾರದ ನಮ್ಮ ಕ್ಲಿನಿಕ್ ದಲ್ಲಿ ಶಾಸಕ ರಾಜು ಕಾಗೆ ಇವರು ಬಾಲಕರಿಗೆ ಪೋಲಿಯೋಲಸಿಕರಣ ಹಾಕಿಸಿ ಕಾರ್ಯಕ್ರಮ ನೆರವೇರಿಸಿದರು.

ರವಿವಾರ 21 ರಿಂದ ಬುಧವಾರ 24ರ ವರೆಗೆ ಪೋಲಿವೂ ಲಸಿಕೆ ನೀಡುವ ಯೋಜನೆ ಜಾಲನೆಯಲ್ಲಿ ಇದೆ. ಎಲ್ಲ ಬಾಲಕರ ಪೋಷಕರು ಮಕ್ಕಳಿಗೆ ಲಸಿಕೆಗಳು ಹಾಕಿಸಿ, ಪೋಲಿಯೋಮುಕ್ತ ಭಾರತ ಮಾಡಲು ಸಹಕರಿಸಿರಿ ಎಂದು ಶಾಸಕ ರಾಜು ಕಾಗೆ ಕರೆ ನೀಡಿದರು.

ಉಗಾರ ಆರೋಗ್ಯ ಕೇಂದ್ರದ ಪ್ರಭಾರಿ ವೈದ್ಯಾಧಿಕಾರಿ ಡಾ. ಅಭಿಜಿತ್ ಇವರು ಪೋಲಿವ ಲಷ್ಕರಣ ಬಗ್ಗೆ ವಿವರಿಸುವಾಗ ಕೇಂದ್ರ ವ್ಯಾಪ್ತಿಯಲ್ಲಿ 3,540 ಬಾಲಕರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇಟ್ಟಂಗಿ ನಿರ್ಮಿಸುವ 15 ಸ್ಥಳದಲ್ಲಿ ಮತ್ತು ಕಬ್ಬು ಕಟಾವಣೆಗಾಗಿ ಬಂದಿರುವ ಕಾರ್ಮಿಕರ 6 ಸ್ಥಳದಲ್ಲಿ ಇರುವ ತಂಡಗಳ ಬಾಲಕರಿಗೆ ಲಸಿಕೆ ಹಾಕುವ ಯೋಜನೆ ನೆರವೇರುತ್ತದೆ. ಮಂಗಳವಾರ, ಮತ್ತು ಬುಧವಾರ ಎರಡು ದಿನ ಮನೆ ಮನೆಗೆ ತರಳಿ ಬಾಲಕರಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಜರಗಲಿದ್ದು ಇತರ ಲಾಭ ತೆಗೆದು ಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.

ನಮ್ಮ ಕ್ಲಿನಿಕ ವ್ಯಾಪ್ತಿಯ ವಾರ್ಡ್ ನಂಬರ್ 20ರ ಪುರಸಭೆ ಸದಸ್ಯ ಮಹದೇವ್ ವಡಗಾವೆ ಇವರು ಬಾಲಕರಿಗೆ ಪೋಲಿವುಲಸಿಕೆ ಹಾಕಿ ಇನ್ನುಳಿದ ಜನರಿಗೆ ಈ ಕಾರ್ಯಕ್ರಮದ ಲಾಭ ತೆಗೆದುಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ಕೇಂದ್ರದ ವೈದ್ಯರಾದ ನಮೃತಾ ಕಾರಚಿ, ಡಾಕ್ಟರ್ ಪೂಜಾ ಕರ್ಪೂರಶೆಟ್ಟಿ ಅಭಯ್ ಗಣೇಶಪುರ, ಹಿರಿಯ ಆರೋಗ್ಯ ನಿರೀಕ್ಷಕ ಅಶೋಕ್ ಕುಂಬಾರ, ಗಣೇಶ್ ತಳಕೇರಿ, ವಿನಾಯಕ್ ಕಾಂಬ್ಳೆ, ಕಿರಣ್ ಅನಗಲಿ, ವಿಶಾಲ ಪಾಂಡ್ರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದೇ ರೀತಿ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಶೀರಗುಪ್ಪಿ, ಐನಾಪುರ, ಮೊಳೆ ಆರೋಗ್ಯ ಕೇಂದ್ರದಲ್ಲಿ ಪೋಲಿಯೋಲೆಸಿಕರಣ ಹಾಕುವ ಕಾರ್ಯಕ್ರಮ ನೆರವೇರಿತು.

Tags:

error: Content is protected !!