Bagalkot

ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನುಷ ಹಲ್ಲೆ ಪ್ರಕರಣ…

Share

ಬಾಗಲಕೋಟೆಯ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ನಡೆದ ಹಲ್ಲೆ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಇತರ ಪೋಷಕರು ಇಂದು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ ಪೋಷಕರು, ಮಕ್ಕಳನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದಾರೆ.

ಬಾಗಲಕೋಟೆ ನವನಗರದ 54ನೇ ಸೆಕ್ಟರ್’ನಲ್ಲಿರುವ ದಿವ್ಯಜ್ಯೋತಿ ವಸತಿ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆದ ಘಟನೆ ಹಿನ್ನೆಲೆ ಈ ಸುದ್ದಿ ತಿಳಿಯುತ್ತಿದ್ದಂತೆ ವಸತಿ ಶಾಲೆಯಲ್ಲಿರುವ ಇತರ ಮಕ್ಕಳ ಪೋಷಕರು ಕಂಗಾಲಾಗಿದ್ದಾರೆ. ಇಂದು ಬೆಳಿಗ್ಗೆಯೇ ಶಾಲೆಯ ಮುಂದೆ ಜಮಾಯಿಸಿದ ಪೋಷಕರು, ಇಂತಹ ವಾತಾವರಣದಲ್ಲಿ ಮಕ್ಕಳನ್ನು ಬಿಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ಪೋಷಕರು ಈ ಒಂದು ಘಟನೆ ಯಾಕೆ ಆಯ್ತು ಅಂತ ಗೊತ್ತಿಲ್ಲ ಒಮ್ಮೇಲೆ ಶಾಕ್ ಆಯ್ತು ನಮಗೆ ಸಡನ್ ಆಗಿ ಫೋನ್ ಮಾಡಿ ಹೇಳಿದಾಗ ಗೊತ್ತಾಗಿದ್ದು ನಮಗೆ ಯಾವಾಗ್ಲೂ ಫೋನಲ್ಲೇ ಮಾತಾಡೋದು ನಾವು ಚೆನ್ನಾಗೆ ನೋಡ್ಕೊಂಡಿದ್ದಾರೆ ಆದರೆ ಈ ತರ ಆಗಿದ್ದು ಶಾಕ್ ಆಗಿದೆ ನಮಗೆ ಪ್ರಭಾಕರ್ ಸರ್ ಅವರೆ ಹೇಳಿದ್ದು ಅದಕ್ಕೆ ನಾವು ಬಂದಿದ್ದು ಇಲ್ಲಿ ಬಿಟ್ಟು ಹೋಗಿರೊ ಮಕ್ಕಳನ್ನ ಎಲ್ಲ ಹೊಡಿತಿದಾರೆ ಬಂದು ನಿಮ್ಮ ಮಕ್ಕಳನ್ನ ಕರೆದುಕೊಂಡು ಹೋಗಿ ಅಂತ ಹೇಳಿದರು .

ಯಾವುದೇ ಮಕ್ಕಳಾದರೂ ಒಂದೇ ಅಲ್ವಾ ಆ ಮಕ್ಕಳಿಗೆ ಆ ಥರ ಆಗಿದೆ ಅಂತಾನೆ ಇಲ್ಲಿ ಬಿಟ್ಟು ಹೋಗಿದ್ದು ಚೆನ್ನಾಗಿ ನೋಡ್ಕೋಬೇಕು ಇಲ್ಲ ಅಂದರೆ ಕಳಿಸಿಬಿಡಬೇಕು ಅದು ಬಿಟ್ಟು ಈ ತರ ಮಾಡುವುದು ತಪ್ಪು ಕಣ್ಣಾಗ ಖಾರ ಹಾಕಿ ಪೈಪ್’ನಿಂದ ಹೊಡಿಯುವಂತದ್ದು ಏನಿರಬಹುದು ಇವರ ಉದ್ಧೇಶ? ಏನು ಸಾಯಿಸಬೇಕಂತ ಮಾಡಿದ್ದಾರಾ?ಇಂತಹ ಕೃತ್ಯ ಮಾಡಿದವರಿಗೆ ಸರಿಯಾದ ಶಿಕ್ಷೆ ಅಗ್ಲೇ ಬೇಕು ಕಾಲ್ ಮಾಡಿದ್ರೂ ರಿಸೀವ್ ಮಾಡಿಲ್ಲ ಅವರು ಇಷ್ಟು ದಿನ ಇಲ್ಲದೇ ಇರುವಂತದ್ದು ಇವಾಗ ಯಾಕೆ ಈ ತರ ಮಾಡಿದ್ದಾರೆ ಅನ್ನೋದು ಗೋತ್ತಾಗ್ತಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ಬಿಡಿಸಿಕೊಂಡು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಸದ್ಯ ಶಾಲೆಯ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರುತ್ತಿದ್ದಾರೆ.

Tags:

error: Content is protected !!