ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮಧ್ಯಸ್ಥಿಯಿಂದ ಪ್ರತಿ ಟನ್ ಕಬ್ಬಿಗೆ 3300 ದರ ನಿಡುವ ಬಗ್ಗೆ ಒಪ್ಪಂದವಾಗಿ ಸಕ್ಕರೆ ಕಾರ್ಖಾನೆಗಳು ಹಂಗಾಮ ಪ್ರಾರಂಭಿಸಿದ್ದಾರೆ.

ಆದರೆ ಉಗಾರ, ಕೆಂಪುವಾಡ, ಅಥಣಿ ಸೇರಿದಂತೆ ಕೆಲಸಕ್ಕರ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3200 ರೂಪಾಯಿ ರೈತರ ಖಾತೆಗೆ ಸಮ ಮಾಡುತ್ತಿದ್ದರಿಂದ ಉಗಾರ್ ಸಕ್ಕರೆ ಕಾರ್ಖಾನೆಯಾದರು ಉಗಾರ್, ಐನಾಪುರ್, ಶಿರುಗುಪ್ಪಿ, ಗ್ರಾಮಗಳ ಪರಿಸರದ ನೂರಾರು ರೈತರು ಒಂದುಗೂಡಿ ಉಗಾರ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರಿಗೆ ಭೇಟಿಯಾಗಿ 3300 ರೂಪಾಯಿ ಹಣ ಒಂದೇ ಕಂತಿನಲ್ಲಿ ಜಮಾ ಮಾಡಬೇಕೆಂದು ಕೇಳಿಕೊಂಡರು.
ಶನಿವಾರ ದಂದು ಉಗಾರ ಸಕ್ಕರೆ ಕಾರ್ಖಾನೆಯ ಎದುರು ರೈತ ಮುಖಂಡರಾದ ಸಂಜಯ್ ಬಿರಡಿ, ಸುರೇಶ್ ಚೌಗುಲೆ, ಗಜಾನನ ಎರಂಡೂಲೆ, ಪ್ರವೀಣ ಕುಲಕರ್ಣಿ ಸೇರಿದಂತೆ ಕೆಲ ರೈತ ಮುಖಂಡರು ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಚಂದನ್ ಶಿರಗೌಂಕರ್ ಇವರಿಗೆ ಭೇಟಿಯಾಗಿ ಉಳಿದ ಸಕ್ಕರೆ ಕಾರ್ಖಾನೆಗಳು ಪ್ರತಿಟನ ಕಬ್ಬಿಗೆ ಏಕಕಾಲಕ್ಕೆ 3300 ರೂಪಾಯಿ ಹಣ ಪಾವತಿಸುತ್ತಿದ್ದಾರೆ ನೀವು 3200 ರೂಪಾಯಿ ಪ್ರತಿಫನ್ ಕಬ್ಬಿಗೆ ಪಾವತಿಸುತಿದ್ದೀರಿ ನೀವು ಏಕಕಾಲಕ್ಕೆ 3300 ಹಣ ಪಾವತಿಸಿರಿ ಎಂದು ಕೇಳಿಕೊಂಡರು.
ಇದೇ ತಾಲೂಕಿನ ಕಾಗವಾಡದ ಶಿರುಗುಪ್ಪಿ ಶುಗರ್ ವರ್ಕ್, ಶಿವಶಕ್ತಿ ಶುಗರ್ಸ್, ಅರಿಯಂತ್ ಶುಗರ್ಸ್, ಬೇಡಿಕೆಯಾಳದ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಈ ಎಲ್ಲ ಕಾರ್ಖಾನೆಗಳು ಏಕಕಾಲಕ್ಕೆ 3300 ರೂಪಾಯಿ ಹಣ ಪಾವತಿಸುತ್ತಿದ್ದಾರೆ. ಆದರೆ ಉಗಾರ್ ಸುಗರ್ ವರ್ಕ್, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ, ಕೆಂಪುವಾಡದ ಅಥಣಿ ಫಾರ್ಮರ್ಸ್ ಈ ಕಾರ್ಖಾನೆಗಳು 3200 ರೂಪಾಯಿ ಹಣ ಪಾವತಿಸಿದಿರಿ ಇದರಲ್ಲಿಯ ಒಂದು ನೂರು ರೂಪಾಯಿ ಹಣ ಸೇರಿಸಿ ಉಳಿದ ಸಕ್ಕರೆ ಕಾರ್ಖಾನೆಗಳಂತೆ3300 ರೂಪಾಯಿ ಹಣ ಖಾತೆಗೆ ಜಮಾ ಮಾಡಿರಿ ಎಂದು ಕೇಳಿಕೊಂಡರು.
ಉಗಾರ ಸಕ್ಕರೆ ಕಾರ್ಖಾನೆಯ ಆಡಳಿತ ಅಧಿಕಾರಿ ಅನಂತ ಸಿದ್ಧಾಂತಿ ಸಕ್ಕರೆ ಕಾರ್ಖಾನೆ ಪರವಾಗಿ ಮಾಹಿತಿ ನೀಡಿ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯದಲ್ಲಿ ಆಗಿರುವ ಒಪ್ಪಂದದಂತೆ ಎಲ್ಲ ರೈತರಿಗೆ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ದರ ನೀಡುವುದು ಇದರಲ್ಲಿ ಯಾವುದೇ ಬೇರೆ ಮತ ಇಲ್ಲ. ರಾಜ್ಯ ಸರ್ಕಾರ ನೀಡಲಿರುವ ಪ್ರತಿಫಲ 50 ರೂಪ. ಮತ್ತು ಸಕ್ಕರೆ ಕಾರ್ಖಾನೆದಿಂದ 50 ರೂಪಾಯಿ ಇದನ್ನು ಸೇರಿಸಿ100 ರೂಪಾಯಿ ಇದೇ ಹಂಗಾಮಿನ ಕೊನೆವರೆಗೆ ಎಲ್ಲ ರೈತರು ಖಾತೆಗೆ ಜಮಾ ಮಾಡಲಾಗುವುದು.
ಕಬ್ಬು ಬೆಳೆಗಾರರು ಯಾವುದೇ ತಪ್ಪು ಮಾಹಿತಿ ಪಡೆದುಕೊಂಡು ನಿರಾಸೆ ಆಗಬೇಡಿ ಸಕ್ಕರೆ ಕಾರ್ಖಾನೆ ನಿಮ್ಮ ಪರವಾಗಿ ಇದೆ, ಈಗಾಗಲೇ 6 ಲಕ್ಷ ಟನ್ ಕಬ್ಬು ನುರಿಸಿದ್ದು ಕಬ್ಬು ಪೂರೈಸಿ ಸಹಕರಿಸಿರಿ, ನಿಮಗೆ ನೀಡುವ 3300 ರೂಪಾಯಿ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿ ರೈತರಿಗೆ ಸಹಕಾರ ಭಾವನೆಯಿಂದ ಕಬ್ಬು ಪೂರೈಸಿರಿ ಎಂದು ವಿನಂತಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸಂಜಯ್ ಬಿರಡಿ ಸುರೇಶ್ ಚೌಗುಲೆ ಗಜಾನನ ಎರಂಡೂಲಿ, ಪ್ರವೀಣ ಕುಲಕರ್ಣಿ, ಬಾಹುಬಲಿ ಕುಸನಾಳೆ, ರಾಜು ಕನಾಳೆ, ಅಕ್ಷಯ್ ಅಕಿವಾಟೆ, ಸಂಜಯ್ ಕುಸನಾಳೆ, ವರ್ಧಮನ್ ಪಾಟೀಲ್, ಸತೀಶ್ ಗಾಣಿಗೇರ್, ವಿಶ್ವಾಸ್ ಕಟಾವೆ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
