Dharwad

ಧಾರವಾಡದಲ್ಲಿ ಬಿಹಾರ ಸಿಎಂ ವಿರುದ್ಧ ಆಕ್ರೋಶ…

Share

ವೈದ್ಯರ ನೇಮಕಾತಿ ಪತ್ರ ನೀಡುವ ಸಂದರ್ಭದಲ್ಲಿ ಬಿಹಾರ ಸಿಎಂ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್‌ನ್ನು ಜಗ್ಗಿ ಪ್ರಮಾಣಪತ್ರ ನೀಡಿರುವುದನ್ನು ವಿರೋಧಿಸಿ, ಧಾರವಾಡದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.‌

ವೈ- ಜಿಲ್ಲಾಧಿಕಾರಿ ಕಚೇರಿ ಎದುರು ಉತ್ತರ ಕರ್ನಾಟಕ ಹೋರಾಟ ವೇದಿಕೆ ಹಾಗೂ ಎಪಿಸಿಆರ್ ಫಾರ್ವರ್ಡ್ ಟ್ರಸ್ಟ್ ನೇತೃತ್ವದಲ್ಲಿ ಸದಸ್ಯರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಿಹಾರದ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಮುಸ್ಲಿಂ ವೈದ್ಯೆಯೊಬ್ಬರು ಹಿಜಾಬ್ ಧರಿಸಿ ಬಂದಿದ್ದರು. ಆಗ ಬಿಹಾರ ಸಿಎಂ ನಿತೀಶಕುಮಾರ್ ಅವರು, ಆ ಹಿಜಾಬ್ ಜಗ್ಗಿ ಆನಂತರ ಪ್ರಮಾಣಪತ್ರ ವಿತರಿಸಿದ್ದಾರೆ. ಆ ವೀಡಿಯೋ ಕೂಡ ವೈರಲ್ ಆಗಿದೆ. ಆ ಮೂಲಕ ಬಿಹಾರ ಸಿಎಂ ಅವರು ಧಾರ್ಮಿಕ ಉಡುಪಿಗೆ ಅವಮಾನಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ಓರ್ವ ಮುಸ್ಲಿಂ ವೈದ್ಯೆಗೆ ಅವರು ಅವಮಾನಿಸಿದ್ದಾರೆ. ಕೂಡಲೇ ಅಲ್ಲಿನ ಸಿಎಂ ನಿತೀಶಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕೆಳಗಿಳಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Tags:

error: Content is protected !!