ಬೈಕ್ ಸ್ಕೀಡ್ ಆಗಿ ಬಿದ್ದು ಬೈಕ್ ಚಾಲಕನ ತಲೆ ಭಾಗಕ್ಕೆ ಗಂಭೀರವಾದ ಗಾಯವಾಗಿರುವ ಘಟನೆ ಧಾರವಾಡ ತೇಜಸ್ವಿ ನಗರದ ರೈಲ್ವೆ ಬ್ರಿಡ್ಜ್ ಮೇಲೆ ಗುರುವಾರ ತಡ ರಾತ್ರಿ ನಡೆದಿದೆ.

ವೈ – ಧಾರವಾಡ ಕಲಘಟಗಿ ರಸ್ತೆಯ ತೇಜಸ್ವಿ ನಗರದ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ. ನಡೆದಿದೆ. ತಡ ರಾತ್ರಿ ಘಟನೆ ಸಂಭವಿಸಿದ್ದ ಹಿನ್ನಲೆ ವಾಹನ ಸವಾರರೇ ಬೈಕ್ ಸವಾರನ ರಕ್ಷಣೆಗೆ ಧಾವಿಸಿ ಅಂಬ್ಯುಲೇನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವಿದ್ಯಾಗಿರಿ ಠಾಣೆಯ ಪೊಲೀಸರು ಗಾಯಗೊಂಡ ಬೈಕ್ ಚಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ತೇಜಸ್ವಿ ನಗರದ ಮೂಲದ ಬೈಕ್ ಚಾಲಕ ಎಂದು ತಿಳಿದು ಬಂದಿದ್ದು, ಚಾಲಕನ ವಿವರ ತಿಳಿದು ಬರಬೇಕಾಗಿದೆ. ಬೈಕ್ ಚಾಲಕನ ತಲೆ ಭಾಗಕ್ಕೆ ತೀವ್ರವಾದ ಪೆಟ್ಟು ಬಿದಿದೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
