ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಶಿವಾನಂದಮಠದ ಸ್ವಾಮೀಜಿಯ ಖಾಸಗಿ ಬೆತ್ತಲೆ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋ ಚಿತ್ರೀಕರಣ ಮಾಡಿಕೊಂಡ ಗ್ಯಾಂಗ್ ಸ್ವಾಮೀಜಿಯಿಂದ 10 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು ಎಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ.

ವೈ- ಹೌದು! ಕವಲಗೇರಿ ಶಿವಾನಂದಮಠದ ಸರಸ್ವತಿ ಸ್ವಾಮೀಜಿ ಅದೇ ಮಠದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ತಾನು ಬೆತ್ತಲಾದ ಸ್ವಾಮೀಜಿ ಆ ಮಹಿಳೆಯಿಂದ ಸ್ನಾನ ಮಾಡಿಸಿಕೊಂಡಿದ್ದಾನೆ. ಅಲ್ಲದೇ ಆ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡು ತನ್ನ ಗುಪ್ತಾಂಗವನ್ನೂ ಆ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಇಡೀ ದೃಶ್ಯವನ್ನು ಗ್ಯಾಂಗ್ ಒಂದು ರೆಕಾರ್ಡ್ ಮಾಡಿತ್ತು. ಈ ವೀಡಿಯೋ ಚಿತ್ರೀಕರಣ ಮಾಡಿದ್ದ ತಂಡದ ಜೊತೆ ಸ್ವಾಮೀಜಿ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ವೀಡಿಯೋ ವೈರಲ್ ಮಾಡದಂತೆ ಮನವಿ ಮಾಡಿದ್ದರು. ಅದಕ್ಕಾಗಿ ಆ ಗ್ಯಾಂಗ್ ಸ್ವಾಮೀಜಿಯಿಂದ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿತ್ತು. ಕಡೆಗೆ ಇದು 10 ಲಕ್ಷಕ್ಕೆ ಡೀಲ್ ಕೂಡ ಆಗಿತ್ತು. 10 ಲಕ್ಷದ ಪೈಕಿ ಸ್ವಾಮೀಜಿ 7 ಲಕ್ಷ ಹಣವನ್ನು ಆ ಗ್ಯಾಂಗ್ಗೆ ನೀಡಿದ್ದರು. ಬಾಕಿ 3 ಲಕ್ಷ ನೀಡದೇ ಇದ್ದಿದ್ದಕ್ಕೆ ಇದೀಗ ಆ ಗ್ಯಾಂಗ್ ವೀಡಿಯೋ ವೈರಲ್ ಮಾಡಿದೆ. ವೀಡಿಯೋ ವೈರಲ್ ಆಗಿದ್ದರಿಂದ ಕವಲಗೇರಿ ಗ್ರಾಮಸ್ಥರು ಆ ಸ್ವಾಮೀಜಿ ಮೇಲೆ ಕಂಗಾಲಾಗಿದ್ದಾರೆ. ಈ ವೀಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆ ಗ್ಯಾಂಗ್ ವಿರುದ್ಧ ಇದೀಗ ಸ್ವಾಮೀಜಿ ಜೆಎಂಎಫ್ಸಿ ಕೋರ್ಟ್ನಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲದೇ ಆ ಗ್ಯಾಂಗ್ ವಿರುದ್ಧ ಧಾರವಾಡ ಗ್ರಾಮೀಣ ಠಾಣೆಯಲ್ಲೂ ದೂರು ದಾಖಲಿಸಲು ಸ್ವಾಮೀಜಿ ಮುಂದಾಗಿದ್ದಾರೆ.
