ದೆಹಲಿಯಿಂದ ಬೆಳಗಾವಿಗೆ ಆಗಮಿಸುತ್ತಿರುವ ಕರ್ನಾಟಕದ ಸುಮಾರು 20 ಕ್ಕೂ ಹೆಚ್ಚು ಜನ ಶಾಸಕರು,ಸಚಿವರು ವಿಮಾನದಲ್ಲೆ ಲಾಕ್ ಆಗಿದ್ದಾರೆ.


ರವಿವಾರ ದೆಹಲಿಯ ಮತಗಳುವು ಹೋರಾಟದಲ್ಲಿ ಭಾಗವಹಿಸಿ ಇಂದು ದೆಹಲಿಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗ ವಹಿಸಲು ಇಂಡಿಗೋ ವಿಮಾನ ಮೂಲಕ ಆಗಮಿಸುತ್ತಿರುವ ಸಚಿವರಾದ ಸತೀಶ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್ ಕೆ ಪಾಟೀಲ,ಸಲಿಂ ನದಾಫ್, ಕೆ ಜೆ ಜಾರ್ಜ್ ಸೇರಿದಂತೆ 20 ಕ್ಕೂ ಹೆಚ್ಚು ಶಾಸಕರು ,ಸಚಿವರು ಹವಾಮಾನದ ವೈಪರೀತ್ಯದಿಂದಾಗಿ ವಿಮಾನ ಟೇಕ್ ಆಫ್ ಆಗದೆ, ಸುಮಾರು ಐದು ಗಂಟೆಗಳ ಕಾಲ ಪರದಾಡಿದರು. ನಂತರ 10 ಘಂಟೆಯ ನಂತರ ವಿಮಾನ ಟೇಕ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.
