Kagawad

ಕಾಗವಾಡದ ಜ್ಯೋತಿರ್ಮಯ ಆಸ್ಪತ್ರೆಯಲ್ಲಿ ಮಹಿಳೆಯರ ಉಚಿತ ಆರೋಗ್ಯ ತಪಾಸನೆ ಶಿಬಿರ ಜರಗಿತು.

Share

ಕಾಗವಾಡದ ಸ್ತ್ರೀರೋಗ ತಜ್ಞರಾದ ಡಾ. ಗಿರೀಶ್ ಪಾಟೀಲ್ ಹಾಗೂ ಡಾಕ್ಟರ್ ಸ್ವಾತಿ ಪಾಟೀಲ್ ಈ ದಂಪತಿಗಳು ಜ್ಯೋತಿರ್ಮಯ ಆಸ್ಪತ್ರೆ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸನೆ ಸಿಬಿರ ಹಮ್ಮಿಕೊಂಡು ಅನೇಕರಿಗೆ ಇದರ ಲಾಭ ನೀಡಿದರು.

ರವಿವಾರ ಬೆಳಗ್ಗೆ ಜ್ಯೋತಿರ್ಮಯ ಆಸ್ಪತ್ರೆಯಲ್ಲಿ ಕವಲಗುಡ್ಡ ಮಠದ ಅಮರೇಶ್ವರ ಮಾರಾದರೂ ಹಾಗೂ ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯವಹಿಸಿದರು.
ಕವಲಗುಡ್ಡ ಆಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ ಸರಕಾರ ಮಾಡುವ ಎಲ್ಲ ಸೇವೆಗಳು ಸಾರ್ವಜನಿಕರು ಸಮಾಜ ಸೇವಕರು ನೀಡಲು ಮುಂದೆ ಬಂದಿದ್ದಾರೆ. ಡಾಕ್ಟರ್ ಗಿರೀಶ್ ಪಾಟೀಲ್ ದಂಪತಿಗಳು ಕಾಗವಾಡದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸನೆ ನೆರವೇರಿಸಿ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಇಂದಿನ ವಿಜ್ಞಾನ ಯುಗದ ಹೆಸರಿನಲ್ಲಿ ಬೇರೆ ಬೇರೆ ವೈದ್ಯರು ಆಸ್ಪತ್ರೆಗಳು ಪ್ರಾರಂಭಿಸಿ ಅಲ್ಲಿಗೆ ಸಾಮಾನ್ಯ ಜನರು ಉಪಚಾರ ಪಡೆಯಲು ಅಸಾಧ್ಯವಿದೆ ಅಂತಹ ತಿಥಿಯಲ್ಲಿ ಈ ದಂಪತಿಗಳು ಉಚಿತ ಸೇವೆ ನೀಡುತ್ತಿದ್ದಾರೆ ಇದು ಒಂದು ಲೆಗನೀಯ ಎಂದರು.
ಯತೀಶ್ವರಾನಂದ ಸ್ವಾಮೀಜಿ ಮಾತನಾಡಿ ಪರಮಪೂಜ್ಯ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ನಡೆದಾಡುವ ದೇವರು ಎಂದು ಖ್ಯಾತಿ ಪಡೆದ ಸಿದ್ದೇಶ್ವರ ಸ್ವಾಮೀಜಿ ಇವರ ಪಾವನ ಪದಪೋರ್ಷದಿಂದ ಪವಿತ್ರವಾದ ಕಾಗವಾಡ ಪರಿಸರದಲ್ಲಿ ಡಾ. ಗಿರೀಶ್ ಪಾಟೀಲ್ ದಂಪತಿಗಳು ಇದರ ಲಾಭ ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.
ಡಾಕ್ಟರ್ ಗಿರೀಶ್ ಪಾಟೀಲ್ ಮಾತನಾಡಿ ಜ್ಯೋತಿರ್ಮಯ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಇದರ ಲಾಭ ಅನೇಕ ಮಹಿಳೆಯರು ಪಡೆದುಕೊಂಡಿದ್ದಾರೆ. ಇಲ್ಲಿಗೆ ಸ್ತ್ರೀಯರೇ ಬಂಜೆತನ, ಹೆರಿಗೆ, ಇನ್ನುಳಿದ ಅನೇಕ ಕಾಯಿಲೆಗಳ ಮೇಲೆ ಉಚ್ಚಾರ ಪಡಿಬಹುದು ಎಂದು ಹೇಳಿದರು
ಸಿಬಿರ ಯಶಸ್ವಿ ಗೊಳಿಸುವಲ್ಲಿ ಡಾಕ್ಟರ್ ರಾಜು ಪಾಟೀಲ್ ನಿವೃತ್ತ ಪ್ರಾಚಾರ್ಯ ಬಿ ಎನ್ ಪಾಟೀಲ್, ಬಿ ಎ ಪಾಟೀಲ್, ಭೀಮ ಪಾಟೀಲ್, ಎ ಜಿ ನ್ಯಾಮಗೌಡರ,, ಅಜಿತ್ ಚೌಗೂಲೆ, ರಮೇಶ್ ಚೌಗುಲೆ, ಬಸು ಪಾಟೀಲ್, ಸೌರಭ ಪಾಟೀಲ್, ಕಾಕಾ ಪಾಟೀಲ್, ನಾಥಗೌಡ ಪಾಟೀಲ್,
ಅನಾಸಾಹೇಬ್ ಕಟಾರೆ, ಜ್ಯೋತಿಕುಮಾರ್ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Tags:

error: Content is protected !!