ದೇಶದಲ್ಲಿ ಸಂವಿಧಾನ ಕೈಯಲ್ಲಿ ಹಿಡಿದು ಓಡಾಡುವವರು ಸಂವಿಧಾನದ ಗಾಳಿಗೆ ತೂರುತ್ತಿದ್ದಾರೆ. ಸಂವಿಧಾನಕ್ಕೆ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಗೌರವ ನೀಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ ಎಂದು ಪ್ರಹ್ಲಾದ ಜೋಷಿ ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ ಆದರೆ ಕಾಂಗ್ರೆಸ್ ನಾಯಕರ ಆಟಿಟ್ಯೂಡ್ ಬದಲಾವಣೆ ಆಗುತ್ತಿಲ್ಲ. ಕೋರ್ಟ್ ನಲ್ಲಿ ಅವರ ಪರವಾಗಿ ಬಂದ್ರೆ ಅಷ್ಟೇ ಒಪ್ಪತ್ತಾರೆ. ಇಲ್ಲಂದ್ರೆ ನ್ಯಾಯಾಂಗ ವ್ಯವಸ್ಥೆಯನ್ನು ದೂರುತ್ತಾರೆ. ಇವರಿಗೆ ತಾವು ಹೇಳಿದಂತೆ ಕೇಳುವ ನ್ಯಾಯಾಧೀಶರು ಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ತುಷ್ಟಿಕರಣದ ಪರವಾಗಿ ತೀರ್ಪು ಬಂದಿಲ್ಲ ಅಂತ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಒತ್ತಾಯ ಮಾಡುತ್ತಿದ್ದಾರೆ. ತೀರ್ಪುನ ಮೇಲೆ ಅಫಿಲ್ ಮಾಡಬಹುದು. ಆದರೆ ನ್ಯಾಯಾಧೀಶರನ್ನೇ ಪದಚ್ಯುತಿ ಮಾಡಬೇಕು ಅಂತಿರಾ? ನ್ಯಾಯಾಧೀಶರು ಭ್ರಷ್ಟಾಚಾರ ಮಾಡಿದ್ದ್ರೆ, ಸ್ಥಾನದ ದುರುಪಯೋಗ ಮಾಡಿಕೊಂಡಿದ್ದ್ರೆ ಪದಚ್ಯುತಿ ಮಾಡಬಹುದು. ಆದರೆ ಇದು ದೇಶದ ಇತಿಹಾಸದಲ್ಲಿಯೇ ಅವರ ವಿರುದ್ಧ ತೀರ್ಪು ಕೊಟ್ಟಿರುವ ಹಿನ್ನೆಲೆ ಪದಚ್ಯುತಿ ಮಾಡಲು ಸಹಿ ಮಾಡುತ್ತಿದ್ದಾರೆ. ನಾಳೆ ಎಲೆಕ್ಟ್ರಾನಿಕ್ ಬಾಂಡ್ ಪ್ರಕರಣದಲ್ಲಿ ನಮ್ಮ ವಿರುದ್ಧ ತೀರ್ಪು ಬಂದ್ರೆ ನ್ಯಾಯಾಧೀಶರು ಪದಚ್ಯುತಿ ಮಾಡಬೇಕಾ?. ಕರ್ನಾಟಕ ಸರ್ಕಾರ ದಿವಾಳಿ ಆಗಿದೆ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಚುನಾವಣೆ ಮೂಲಕ ವೋಟ್ ಚೋರಿ ಆರಂಭವಾಗಿದೆ. ಅವರ ಇಂಡಿ ಘಟಬಂಧನೆ ಸದಸ್ಯರೇ ವೋಟ್ ಚೋರಿ ಇಲ್ಲ ಅಂತ ಒಪ್ಪಿಕೊಂಡಿದ್ದಾರೆ ರಾಹುಲ್ ಗಾಂಧಿ ಸಂತೃಪ್ತಿಪಡಿಸಲು ಎಸ್ ಐಟಿ ದುರುಪಯೋಗ ಮಾಡಿಕೊಳ್ಳಲಾಗಿದೆ. ಯಾವುದೇ ಅರ್ಜಿ ಬಂದ್ರೆ ತನಿಖೆ, ನೋಟಿಸ್ ನೀಡುವುದು ಸಹಜ ಎಂದರು. ರಸ್ತೆ ಅಭಿವೃದ್ಧಿಗೆ ಹಣ ಕೊಡಲ್ಲ ಈ ಕಳ್ಳರು. ಅಪಾರ್ಟ್ಮೆಂಟ್ ಮಾಲೀಕನಿಗೆ ಡಿಕೆ ಶಿವಕುಮಾರ ಅವಾಜ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ವರ್ತನೆ ಹಾಗೆ ಇದೆ. ಅವರು ಮೊದಲು ಯಾರು ಶಿಷ್ಯ ಗೊತ್ತಿದೆಯಾ? ಎಂದರು.
