ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಚಿಂಚಣಿ ಶಿವಪ್ರಸಾದ ಸ್ವಾಮೀಜಿ ಹಾಗೂ ಗ್ರಾಮಸ್ಥರು ಬೆಂಬಲ ಸೂಚಿಸಿ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಆಗ್ರಹಿಸಿದರು .

ಈ ಪ್ರತಿಭಟನೆ ಸಿಎಲ್ಇ ಸಂಸ್ಥೆಯ ವಿದ್ಯಾರ್ಥಿಗಳು ಸಾಥ್ ನೀಡಿದರು.ಬಸವ ವೃತ್ತದಲ್ಲಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದರು.ಬಳಿಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಶಿವಪ್ರಸಾದ ಸ್ವಾಮೀಜಿಯವರು ಮಾತನಾಡಿ ಲಿಂಗೈಕ್ಯ ಅಲ್ಲಮಪ್ರಭು ಸ್ವಾಮೀಜಿಯವರು ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದರು.ಆ ಹೋರಾಟ ಮುಂದುವರಿದೆ.ಚಿಕ್ಕೋಡಿಯಲ್ಲಿ ಬಹುತೇಕ ಎಲ್ಲ ಕಚೇರಿಗಳು ಬಂದಿವೆ.ಇನ್ನೂ ಕೆಲ ಕಚೇರಿಗಳು ಬಂದರೆ ಜಿಲ್ಲಾ ಸ್ಥಾನಮಾನ ಹೊಂದುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಿಬೇಕು ಎಂದರು.
ಬಳಿಕ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಎಸ್.ವೈ.ಹಂಜಿ ಮಾತನಾಡಿ ಚಿಕ್ಕೋಡಿ ಜಿಲ್ಲೆಗಾಗಿ ಶಾಸಕರಾದ ಗಣೇಶ ಹುಕ್ಕೇರಿ,ದುರ್ಯೋಧನ ಐಹೊಳೆ ಹಾಗೂ ಶಶಿಕಲಾ ಜೊಲ್ಲೆಯವರು ಧ್ವನಿ ಎತ್ತಿದ್ದು ಸ್ವಾಗತಾರ್ಹ.ಈ ಬಾರಿ ಚಿಕ್ಕೋಡಿ ಜಿಲ್ಲಾ ಘೋಷಣೆ ಆಗುತ್ತೆ ಎಂಬ ಆಶಾಭಾವನೆ ಇದೆ ಎಂದರು.
ಸಮಾಜ ಸೇವಕ ಜಿಲ್ಲಾ ಹೋರಾಟ ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೇವೆ.ಹಲವು ಜನ ಹೋರಾಟಗಾರರು ಮೃತರಾದರು.ಆದ್ರೂ ಕೂಡಾ ಜಿಲ್ಲೆ ಆಗುತ್ತಿಲ್ಲ.ಈ ಕುರಿತಂತೆ ಶಾಸಕ ಗಣೇಶ ಹುಕ್ಕೇರಿಯವರು ಸದನದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದರು.
ಈ ಸಂದರ್ಭದಲ್ಲಿ ರುದ್ರಪ್ಪ ಸಂಗಪ್ಪಗೋಳ,ಸುರೇಶ ಬ್ಯಾಕೂಡೆ,ಸಂಜು ಬಡಿಗೇರ,ಚಂದ್ರಶೇಖರ ಅರಬಾವಿ,ಕೃಷ್ಣಾ ಕೆಂಚನ್ನವರ,ಕುಮಾರ ಗುಡಿ,ರಮೇಶ ಕರನೂರೆ,ಅಪ್ಪಣಾ ಚೌಗಲಾ,ಸಂದೀಪ ವಾವರೆ,ಮಲ್ಲಿಕಾರ್ಜುನ ಟಿಕ್ಕೆ,ಕೃಷ್ಣಾ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
