Vijaypura

ಬರಡಾಗಿದ್ದ ಜಮೀನಿಗೆ ನೀರು ಕೊಟ್ಟ ಸಚಿವರಿಗೆ ಬಾಹುಬಲಿ ಹಣ್ಣು ಕೊಟ್ಟು ರೈತನ ಕೃತಜ್ಞತೆ

Share

ವಿಜಯಪುರ ಜಿಲ್ಲೆಯಲ್ಲಿ ಈ ಮೊದಲು ಭೂಮಿ ಬರಡಾಗಿದ್ದವು.‌ ಆದ್ರೆ ಸಚಿವ ಎಂ.ಬಿ.ಪಾಟೀಲ ಭಗೀರಥ ಪ್ರಯತ್ನದ ಫಲವಾಗಿ ಇಂದು ನೀರು ಹರಿದು ರೈತರಿಗೆ ಆದಾಯ ಹೆಚ್ಚಿಸಿದೆ. ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದ ಕಾಖಂಡಕಿ ಗ್ರಾಮದ ಪ್ರಗತಿಪರ ರೈತರಾದ ಸತೀಶ್ ಮ. ಬಿರಾದಾರ್ ಅವರು 4 ಎಕರೆ ಜಮೀನಿನಲ್ಲಿ ಕೇವಲ 60 ದಿನಗಳಲ್ಲಿ 70ಟನ್ ಕಲ್ಲಂಗಡಿ ಬೆಳೆದಿರುವುದು ವಿಶೇಷ. ಈ ಹಣ್ಣುಗಳನ್ನು ಕೆ.ಜಿ.ಗೆ ಅಂದಾಜು ರೂ. 25 ರಂತೆ ಮಾರಾಟಮಾಡಿ 15 ಲಕ್ಷ ಗಳಿಸಿದ್ದಾರೆ. ‌ಈ ಹಿನ್ನೆಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಇವರಿಗೆ ಬಾಹುಬಲಿ‌ ಕಲ್ಲಂಗಡಿ ಹಣ್ಣು ಕೊಟ್ಟು ಕೃತಜ್ಞತೆ ಸಲ್ಲಿಸಿದರು. ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ನೀರಾವರಿಯೋಜನೆಯಿಂದಾಗಿ ಸಾಧ್ಯವಾಗಿದೆ ಎಂದು ಸಂತಸ ಮತ್ತು ಹೆಮ್ಮೆಯಿಂದ ತಿಳಿಸಿದರು. ತಾವು ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಸ್ವೀಕರಿಸಿದ ಸಚಿವರು ಅವರ ಅಭಿಮಾನಕ್ಕೆ ಕೃತಜ್ಞತೆಗಳು ಎಂದು ತಿಳಿಸಿದರು. ಇಂತಹ ಯಶೋಗಾಥೆಗಳು ನೀರಾವರಿ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತವೆ. ನಮ್ಮ ರೈತರು ಇಂತಹ ನೂತನ ಪ್ರಯೋಗಗಳನ್ನು ಅಳವಡಿಸಿಕೊಂಡು ಹೆಚ್ಚು ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.

Tags:

error: Content is protected !!