Chikkodi

ತೀವ್ರಗೊಂಡ ಚಿಕ್ಕೋಡಿ ಜಿಲ್ಲಾ ಹೋರಾಟ,ಹೋರಾಟಕ್ಕೆ ವಕೀಲರ ಬೆಂಬಲ

Share

ಚಿಕ್ಕೋಡಿ ಪ್ರತ್ಯೇಕ ಜಿಲ್ಲಾ ಹೋರಾಟ ಕಾವು ರಂಗೇರಿದೆ.ಈ ಹೋರಾಟಕ್ಕೆ ವಕೀಲರು ಬೆಂಬಲವನ್ನು ಸೂಚಿಸಿ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಆಗ್ರಹಿಸಿದರು.

ಕೋರ್ಟದಿಂದ ಪ್ರತಿಭಟನಾ ರ್ಯಾಲಿಯು ಪ್ರಾರಂಭವಾಗಿ ಬಸವ ವೃತ್ತದ ಮೂಲಕ ತಹಶಿಲ್ದಾರ ಕಚೇರಿವರೆಗೆ ಸಾಗಿತು.ಪ್ರತಿಭಟನಾ ರ್ಯಾಲಿಯ ಉದ್ದಕ್ಕೂ ವಕೀಲರು ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಆಗ್ರಹಿಸಿದರು. ಬಳಿಕ ಗ್ರೇಡ್-೨ ತಹಶಿಲ್ದಾರರ ಪರಮಿಳಾ ದೇಶಪಾಂಡೆ ಮೂಲಕ ‌ಮುಖ್ಯಮಂತ್ರಿಗೆ ಮನವಿಯನ್ನು ‌ಸಲ್ಲಿಸಿದರು.ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಮಾತನಾಡಿ ಜೆ.ಎಚ್.ಪಾಟೀಲ ಮುಖ್ಯಮಂತ್ರಿ ಇದ್ದಾಗ ಚಿಕ್ಕೋಡಿ-ಗೋಕಾಕವನ್ನು ಜಿಲ್ಲೆವನ್ನಾಗಿ ಘೋಷಿಸಿದ್ದರು.ಅದರಂತೆ ಈ ಸರ್ಕಾರ ಚಿಕ್ಕೋಡಿ ಪ್ರತ್ಯೇ ಜಿಲ್ಲೆಯನ್ನಾಗಿ ಘೋಷಿಸಿಬೇಕು.ಅದರಂತೆ ಜಿಲ್ಲಾ ಹೋರಾಟ ಸಮಿತಿಗೆ ನಮ್ಮ ವಕೀಲರ ಸಂಪೂರ್ಣ ಬೆಂಬಲವಿದೆ ಎಂದರು.

ಬಳಿಕ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ‌ಎಸ್.ವೈ.ಹಂಜಿ ಮಾತನಾಡಿ ದಿನಗಳು ಕಳೆದ ಹಾಗೆ ಚಿಕ್ಕೋಡಿ ಜಿಲ್ಲಾ ಹೋರಾಟಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದ್ದು.ಇವತ್ತು ವಕೀಲರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ನಮಗೆ ಆನೆಬಲ ಬಂದತಾಗಿದೆ ಎಂದರು.

ಈ ಸಂದರ್ಭದಲ್ಲಿ ರಮೇಶ ಹಿತ್ತಲಮನಿ,ಎಸ್‌.ವೈ.ಪಾಟೀಲ, ಬಿ.ಆರ್. ಯಾದವ,ಸುದರ್ಶನ ತಮ್ಮಣನವರ,ಭೀಮಗೌಡ ಖೋತ,ನಿರಂಜನ ಕಾಂಬಳೆ,ರಂಜನಾ ಕರನೂರೆ,ಮಾನಿಕ್ಯಾ ಕಬಾಡಗೆ,ಮಿನಾಕ್ಷಿ ಪಾಟೀಲ, ಚಲವಕ್ಕಾ ಗಡಕರಿ,ಸುರೇಶ ಬ್ಯಾಕೂಡೆ,ನಾಗೇಶ ಮಾಳಿ,ಚನ್ನಪ್ಪ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!