ಧಾರವಾಡದಲ್ಲಿ ಆ್ಯಕ್ಟಿವಾ ಬೈಕನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡುವಲ್ಲಿ ಉರಗ ತಜ್ಞ ಮಂಜುನಾಥ ಯಶಸ್ವಿಯಾಗಿದ್ದಾರೆ.

ವೈ- ಧಾರವಾಡದ ಕಲ್ಯಾಣನಗರದ ನಿವಾಸಿಯೊಬ್ಬರಿಗೆ ಸೇರಿದ ಆ್ಯಕ್ಟಿವಾ ಬೈಕನಲ್ಲಿ ಈ ನಾಗರ ಹಾವಿನ ಮರಿ ಅಡಗಿ ಕುಳಿತಿತ್ತು. ಮಧ್ಯಾಹ್ನ ಆ ಆ್ಯಕ್ಟಿವಾ ಸ್ಕೂಟಿ ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅದರೊಳಗೆ ನಾಗರ ಹಾವಿನ ಮರಿ ಅಡಗಿ ಕುಳಿತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಬೈಕ್ ಮಾಲೀಕರು ಉರಗ ಪ್ರೇಮಿ ಮಂಜುನಾಥ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಮಂಜು ಅವರು ಆ್ಯಕ್ಟಿವಾದ ಮಾಸ್ಕ್ ಬಿಚ್ಚಿ ಅದರೊಳಗಿದ್ದ ನಾಗರ ಹಾವಿನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
