Vijaypura

ಅಧಿಕಾರ ಹಾಗೂ ನಮ್ಮ ಜೀವ ಕೂಡ ನಮ್ಮಪ್ಪನ ಆಸ್ತಿ ಅಲ್ಲಾ: ಸಚಿವ ಎಂ.ಬಿ.ಪಾಟೀಲ

Share

ರಾಜ್ಯದ ಸಿಎಂ ಕುರ್ಚಿ ವಿಚಾರ ಏನೂ ಚರ್ಚೆ ಆಗಿಲ್ಲಾ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ‌ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಸುಪ್ರೀಂ, ಅಧಿಕಾರ ಹಾಗೂ ನಮ್ಮ ಜೀವ ಕೂಡ ನಮ್ಮಪ್ಪನ ಆಸ್ತಿ ಅಲ್ಲಾ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೂ ನ್ಯಾಶನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆ ಬ್ರದರ್ ಗೆ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಡಿಕೆಶಿ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ, ದಾಖಲೆಗಳನ್ನು ಸಹಿತ ಅವರು ನೀಡ್ತಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಉಳಿದಿಲ್ಲ ಚಿದ್ರ ಚಿದ್ರವಾಗಿದೆ, ಮೊದಲು ಮನೆಯನ್ನು ಶುದ್ದ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ ಸಚಿವರು ಆರ್ ಅಶೋಕ ಅವರಿಗೆ ವಿರೋಧ ಪಕ್ಷದ ನಾಯಕನ್ನು ತಗೆದು ಜನಾರ್ಧನ್ ರೆಡ್ಡಿಗೆ ಮಾಡಲಿ‌, ದರೋಡೆಕೋರರಾದ ಜರ್ನಾಧನ್ ರೆಡ್ಡಿಗೆ ಬಿಜೆಪಿಯವರು ವಿರೋಧ ಪಕ್ಷದ ನಾಯಕ ಮಾಡಲಿ ಎಂದು ಕಿಡಿಕಾರಿದರು.

Tags:

error: Content is protected !!