ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾನಸಿಕ, ಬೌದ್ಧಿಕ ಮತ್ತು ಶಾರೀರಿಕ ದೃಷ್ಟಿಯಿಂದ ಸದೃಢ ಗೊಳಿಸಲು ಕ್ರೀಡಾ ಚಟುವಟಿಕೆ ಅವಶ್ಯಕತೆ ಇದೆ. ಸನ್ಮತಿ ಶಿಕ್ಷಣ ಸಮಿತಿ ವತಿಯಿಂದ ಕ್ರೀಡಾ ಚಟುವಟಿಕೆಗಳು ಹಮ್ಮಿಕೊಂಡು ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಎಂದು ಡಾಕ್ಟರ್ ಎಂ.ಡಿ.ಅಲಾಸೆ. ಹೇಳಿದರು.
ಶುಕ್ರವಾರ ರಂದು ಶೇಡಬಾಳದ ಸನ್ಮತಿ ಶಿಕ್ಷಣ ಸಮಿತಿಯಲ್ಲಿ ವಾರ್ಷಿಕ ಕ್ರೀಡ ಮಹೋತ್ಸವದ ಉದ್ಘಾಟನೆ ನೆರ್ವೇರಿಸಿ ಡಾಕ್ಟರ್ ಎಂ.ಡಿ.ಅಲಾಸೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

ಸನ್ಮತಿ ಶಿಕ್ಷಣ ಸಮಿತಿಯ ಎಲ್ಲ ವಿದ್ಯಾರ್ಥಿಗಳು ಕ್ರಿಡಾ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.
ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ್ ಬರಗಾಲೆ, ಉಪಾಧ್ಯಕ್ಷ ಅಜಿತ ನಾಂದ್ರೆ ಹಾಗೂ ಮುಖ್ಯಾಪಕರಾದ ಶ್ರೀಮತಿ ಎಂ.ಎನ್.ಕಾಳೆನಟ್ಟಿ ಇವರು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹ ನೀಡಿದರು.

ಸಂಸ್ಥೆಯ ಮರಾಠಿ ವಿಭಾಗದ ವಿದ್ಯಾರ್ಥಿನಿ ಅಮೃತ ಮಹದೇವ್ ಬೋಸಲೆ ಈ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕುಸ್ತಿ ಮತ್ತು ಜುಡೋ ಸ್ಪರ್ಧೆಯಲ್ಲಿ ಸಾಧನೆ ಮಾಡಿದರಿಂದ ಗೌರವಿಸಲಾಯಿತು, ವಿದ್ಯಾರ್ಥಿನಿ ಭಾರತೀ ಕಾಳಪ್ಪ ಪಾರೆಕರ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ದ್ವಿತೀಯ ಸ್ಥಾನ ಮತ್ತು ರಾಜ್ವರ್ಧನ್ ರಾವಸಾಬ್ ಖರಾತ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದರಿಂದ ಮತ್ತು ವಿಕಲಚೇತನರ ಗುಂಡು ಎಸೆತ ಕ್ರೀಡಾಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹನುಮಂತ ಪಾಂಡ್ರೆ ಈ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಶಿಕ್ಷಕರಾದ ಎಂ.ಕೆ ಕಾಂಬಳೆ ಇವರನ್ನು ಗೌರವಿಸಲಾಯಿತು.
ವಿಭಾಗ ಮಟ್ಟದ ಕ್ರಿಕೆಟ್ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಸಂತೋಷ್ ರತ್ನಪಗೊಳ್, ಕಿರಣ್ ನಿಕಂ, ಪ್ರತೀಕ್ ಪಾಯ್ಪರಪ್ಪ, ಯುಸುಫ ಜಮಾದಾರ್ ಈ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತಮಿಳನಾಡು ರಾಜ್ಯದಿಂದ ಡಾಕ್ಟರೇಟ್ ಪದವಿ ಪಡೆದ ಎಂ.ಡಿ.ಅಲಾಸೆ ಹಾಗೂ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಸುಕುಮಾರ್ ಬನ್ನೂರೆ ಇವರನ್ನು ಗೌರವಿಸಲಾಯಿತು
ಸಮರಂಭದಲ್ಲಿ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜಿತ್ ನಾಂದರೆ, ನಿರ್ದೇಶಕರಾದ ನೇಮಗೌಡ ಪಾಟೀಲ್, ಯಶವಂತ್ ಪಾಟೀಲ್, ಸಿಇಒ ಸತೀಶ್ ಪಾಟೀಲ್, ಸಹ ಶಿಕ್ಷಕರಾದ ಎಸ್.ಡಿ.ಮುತಾಲಿಕ, ಎಚ.ಪಿ.ನಾಯಿಕ ಇವರು ಸ್ವಾಗತಿಸಿ, ನಿರೊಪಿಸಿದರು.
