Chikkodi

ಕಲ್ಲೋಳ ಗ್ರಾಮದ ದತ್ತ ಮಂದಿರದಲ್ಲಿ ವಿಜೃಂಭಣೆಯ ದತ್ತ ಜಯಂತೋತ್ಸವ

Share

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿತೀರದ ದತ್ತ ಮಂದಿರದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದತ್ತ ಜಯಂತಿ ವಿಜೃಂಭಣೆಯಿಂದ ಜರುಗಿತು.

ದತ್ತ ಜಯಂತಿ ಹಿನ್ನೆಲೆಯಲ್ಲಿ ದತ್ತ ದೇವರಿಗೆ ರುದ್ರಾಭಿಷೇಕ,ಆರತಿ,ನವೈದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಅತ್ಯಂತ ಶ್ರಧ್ದಾ ಭಕ್ತಿಯಿಂದ ಮಾಡಲಾಯಿತು. ಭಕ್ತರು ಅತ್ಯಂತ ಭಕ್ತಿಯಿಂದ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ದತ್ತ ದೇವರ ದರ್ಶನ ಪಡೆದರು.ದತ್ತ ಜಯಂತಿ ಹಿನ್ನೆಲೆಯಲ್ಲಿ ಭಕ್ತರ ದಂಡವೇ ಹರಿದು ಬಂದಿತ್ತು.ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಜೋಶಿ ಎಂಬುವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ದತ್ತ ಜಯಂತಿ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದರು.

ಶಾಸಕರಾದ ಗಣೇಶ ಹುಕ್ಕೇರಿ,ದುರ್ಯೋಧನ ಐಹೊಳೆ, ಮಹಾವೀರ ಮೊಹಿತೆ ಸೇರಿದಂತೆ ವಿವಿಧ ಗಣ್ಯರು ದತ್ತದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ರವೀಂದ್ರ ಮಿರ್ಜೆ,ಪ್ರಕಾಶ ಮಿರ್ಜೆ,ಶಿವಗೌಡ ಪಾಟೀಲ, ನಂದಕುಮಾರ ಜೋಶಿ, ಪ್ರವೀಣ ಜೋಶಿ,ವಿವೇಕಾನಂದ ಜೋಶಿ,ಆಶಾ ಜೋಶಿ,ನಂದಕುಮಾರ ದೇಶಪಾಂಡೆ, ಅಭಯ ಅಡಕೆ,ಉದಯ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!