BELAGAVI

ಡಿಸಿಸಿ ಬ್ಯಾಂಕ್ ಸೌಹಾರ್ದ ಸಭೆ

Share

ಡಿಸಿಸಿ ಬ್ಯಾಂಕ್ ಸದಸ್ಯರ ಸೌಹಾರ್ದ ಸಭೆಯಲ್ಲಿ ಸದಸ್ಯರ ಸಲಹೆ ಸೂಚನೆಗಳನ್ನು ಅರಿತು, ರೈತರಿಗೆ ಎಲ್ಲ ರೀತಿಯ ಸೌಲಭ್ಯ ಅನುಕೂಲಗಳನ್ನು ಕಲ್ಪಿಸಲು ಮುಂದಾಗಲಿದೆ ಎಂದು ನಿರ್ದೇಶಕ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಂದು ಬೆಳಗಾವಿಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸೌಹಾರ್ದ ಸಭೆಯನ್ನು ಕರೆಯಲಾಗಿತ್ತು. ವೇದಿಕೆ ಮೇಲೆ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅಣ್ಣಾಸಾಹೇಬ್ ಜೊಲ್ಲೆ, ನಿರ್ದೇಶಕರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ನಿರ್ದೇಶಕರಾದ ರಾಹುಲ್ ಜಾರಕಿಹೊಳಿ, ಪ್ರಧಾನ ವ್ಯವಸ್ಥಾಪಕರಾದ ಕಳಾವಂತ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರಿಂದ ಈ ವೇಳೆ ಸಮಾರಂಭಕ್ಕೆ ಚಾಲನೆಯನ್ನು ನೀಡಲಾಯಿತು. ನಂತರ ವಿವಿಧ ಪಿಕೆಪಿಎಸ್ ಸದಸ್ಯರಿಂದ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಸತ್ಕರಿಸಲಾಯಿತು.

ನಿರ್ದೇಶಕರಾದ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸದಸ್ಯರ-ರೈತರ ಸಲಹೆ ಸೂಚನೆಗಳನ್ನು ಕೇಳುವ ಮೂಲಕ ಡಿಸಿಸಿ ಬ್ಯಾಂಕಿನ ಉನ್ನತಿಗೆ ಪ್ರಯತ್ನಿಸಲಾಗುತ್ತಿದೆ. ಬೆಳಗಾವಿ ತಾಲೂಕಿನಲ್ಲಿ ಮೂರು ಭಾಗಗಳಿದ್ದು, ರಾಹುಲ್ ಜಾರಕಿಹೊಳಿ ಅವರು ಈ ಭಾಗದ ನಿರ್ದೇಶಕರಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕಿನ ಮೂಲಕ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಲಿದ್ದಾರೆ. ರೈತರಿಗೆ ಎಲ್ಲ ರೀತಿಯ ಅನುಕೂಲವನ್ನು ಮಾಡಿಕೊಟ್ಟು, ಈ ಬ್ಯಾಂಕ್ ಉನ್ನತಮಟ್ಟಕ್ಕೆ ಬೆಳೆಯಲಿದೆ. ಅಧ್ಯಕ್ಷರು ಸೇರಿದಂತೆ ನಿರ್ದೇಶಕರು ಎಲ್ಲರ ಮಾರ್ಗದರ್ಶನ ದೊರೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು, ಡಿಸಿಸಿ ಬ್ಯಾಂಕನ್ನು ಮುಂಬರುವ 5 ವರ್ಷಗಳಲ್ಲಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಸವಿಸ್ತಾರವಾಗಿ ಪ್ರತಿ ತಾಲೂಕಾಮಟ್ಟದಲ್ಲಿ ಸಭೆ ನಡೆಸಿ, ಚರ್ಚಿಸಲಾಗುತ್ತಿದೆ. ರಾಜ್ಯದಲ್ಲೇ ಶೂನ್ಯ ಬಡ್ಡಿದರದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅತಿಹೆಚ್ಚು ಬೆಳೆಸಾಲ ನೀಡಿದ ಹೆಗ್ಗಳಿಕೆಯನ್ನು ಗಳಿಸಿದೆ. ರೈತರೇ ಈ ಬ್ಯಾಂಕಿನ ಬೆನ್ನೆಲುಬಾಗಿದ್ದಾರೆ. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡಿರೈತರ ಸೇವೆಯೇ ನಮ್ಮ ನಿರ್ದೇಶಕ ಮಂಡಳದ ಧ್ಯೇಯವಾಗಿದೆ. 10 ಗುಂಟೆ ಜಮೀನಿದ್ದ ರೈತರಿಗೂ ಸಾಲ ನೀಡಲು ಐತಿಹಾಸಿಕ ನಿರ್ಣಯವನ್ನು ಬೋರ್ಡ್ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕಿಗಿಂತಲೂ ಡಿಸಿಸಿ ಬ್ಯಾಂಕಿನೊಂದಿಗೆ ರೈತರು ಹೆಚ್ಚೆಚ್ಚು ವ್ಯವಹಾರಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.

ನಂತರ ವಿವಿಧ ಪಿಕೆಪಿಎಸ್ ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು

Tags:

error: Content is protected !!