ನಮ್ಮ ದೇಶದ ಸಂವಿಧಾನ ಮತ್ತು ವಕೀಲರ ದಿನಾಚಾರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ವಿಶ್ರಾಂತ ನ್ಯಾಯಮೂರ್ತಿ ಎನ್ ಕೆ ಸುದಿಂದ್ರರಾವ್ ಹೇಳಿದರು. ವಕೀಲರ ದಿನಾಚಾರಣೆಯ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶ ಹಾಗೂ ಪೋಲಿಸ್ ಮೇಲ್ಮನವಿ ದೂರು ಪ್ರಾಧಿಕಾರ ಅದ್ಯಕ್ಷ ಎನ್ ಕೆ ಸುದಿಂದ್ರರಾವ್ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ನಿವೃತ್ತ ನ್ಯಾಯಾಧೀಶರಾದ ವಿ ವಿ ಮಲ್ಲಾಪೂರೆ, ಎಂ ಎಂ ಪಾಟೀಲ, ಕೆ ಎಂ ಚೂರಿಖಾನ ,ಪಿ ಎಸ್ ಬಾಳಿಕಾಯ ಮತ್ತು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ, ಆದಿತ್ಯ ಕಲಾಲ, ಜಿ ಜಿ ಬಾದಾಮಿ ಉಪಸ್ಥಿತರಿದ್ದರು. ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ ಮತ್ತು ಸದಸ್ಯರು ಗಣ್ಯರನ್ನು ಸತ್ಕರಿಸಿ ಗೌರವ ಸಮರ್ಪಿಸಿದರು. ಇದಕ್ಕೂ ಮೊದಲು ಹುಕ್ಕೇರಿ ನಗರಕ್ಕೆ ಆಗಮಿಸಿದ ಗಣ್ಯರನ್ನು ವಾದ್ಯ ಮೇಳಗಳೊಂದಿಗೆ ಸಮಾರಂಭದ ವೇದಿಕೆಗೆ ತರಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಪೋಲಿಸ್ ಮೇಲ್ಮನವಿ ದೂರು ಪ್ರಾಧಿಕಾರ ಅದ್ಯಕ್ಷ ಎನ್ ಕೆ ಸುದಿಂದ್ರರಾವ್ ವಕೀಲ ವೃತ್ತಿ ಪವಿತ್ರ ವಾದದ್ದು ಅದನ್ನು ಅರ್ಥಗರ್ಭಿತವಾಗಿ ಸತತ ಅದ್ಯಯನದಿಂದ ರಸಭರಿತವಾದ ಸಂವಿಧಾನವನ್ನು ಮತ್ತು ಪುಸ್ತಕಗಳನ್ನು ನಿರಂತರ ಓದುವ ಮೂಲಕ ವಕೀಲರು ತಮ್ಮ ವೃತ್ತಿಯಲ್ಲಿ ಜಯ ದೊರಕಿಸಬೇಕು ಕಾರಣ ಸಂವಿಧಾನ ಮತ್ತು ವಕೀಲರ ದಿನಾಚಾರಣೆಯನ್ನು ಇಂದು ಹುಕ್ಕೇರಿ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದರು
ಸಾಯಂಕಾಲ ಕೋರ್ಟ ಆವರಣದಲ್ಲಿ ಜರುಗಿದ ಮನರಂಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ ರಾಜ್ಯದಲ್ಲಿ ವಿವಿಧ ದಿನಾಚರಣೆ ಆಚರಿಸಲಾಗುತ್ತದೆ ಆದರೆ ನಿರಂತರ ಅದ್ಯಯನದಿಂದ ನ್ಯಾಯ ದೊರಕಿಸುವ ವಕೀಲರ ದಿನವನ್ನು ಇಂದು ಹುಕ್ಕೇರಿ ವಕೀಲರು ಅದ್ದೂರಿಯಾಗಿ ಆಚರಿಸಿ ಜಾನಪದ ಸಾಹಿತ್ಯ ಮತ್ತು ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದ ಎಲ್ಲ ವಕೀಲ ಬಂದು ಮಿತ್ರರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿರ್ದೆಶಕಿ ವಿದ್ಯಾ ಹೋನಶೇಟ್ಟಿ, ರಾಜ್ಯ ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ಕೋರಿಶೆಟ್ಟಿ,ಹುಕ್ಕೇರಿ ವಕೀಲ ಸಂಘದ ಉಪಾಧ್ಯಕ್ಷ ಬಿ ಎಂ ಜಿನರಾಳಿ,ಕಾರ್ಯದರ್ಶಿ ಎಸ್ ಜಿ ನದಾಫ್, ವಿ ಎಲ್ ಗಸ್ತಿ, ಎ ಎ ಬಾಗೆವಾಡಿ, ಅನಿತಾ ಕುಲಕರ್ಣಿ,ಕೆ ಪಿ ಶಿರಗಾಂವಕರ, ಶಿವಲಿಂಗ ತೇಲಿ,ಆಶಾ ಸಿಂಗಾಡಿ ಹಾಗೂ ಹುಕ್ಕೇರಿ, ಸಂಕೇಶ್ವರ ನ್ಯಾಯವಾದಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

