Chikkodi

ಪಂಚಮಸಾಲಿಗಳ ಮೇಲೆ ಹಲ್ಲೆಗೆ ೧ ವರ್ಷ ಹಿನ್ನಲೆ,ಡಿಸೆಂಬರ್ ೧೦ ರಂದು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ:ಬಸವ ಜಯಮೃತುಂಜಯ ಸ್ವಾಮೀಜಿ

Share

ಮಿಸಲಾತಿಗಾಗಿ ಆಗ್ರಹಿಸಿ ಕಳೆದ ವರ್ಷದ ಪ್ರತಿಭಟನೆ ಸಂದರ್ಭದಲ್ಲಿ ಪಂಚಮಸಾಲಿಗಳ ಪೊಲೀಸರ ದೌರ್ಜನ್ಯಗೆ ೧ ವರ್ಷ ಪೂರೈಕೆಯಾದ ಹಿನ್ನೆಲೆಯಲ್ಲಿ ಈ ಘಟನೆ ಖಂಡಿಸಿ ಡಿಸೆಂಬರ್ ೧೦ ರಂದು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಬಸವ ಜಯಮೃತುಂಜಯ ಸ್ವಾಮೀಜಿ ಹೇಳಿದರು.

ಚಿಕ್ಕೋಡಿ ಪಟ್ಟಣದ ನ್ಯಾಯವಾದಿ ಮಹಾದೇವ ಈಟಿಯವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಮಸಾಲಿಗಳ ಮೇಲಿನ ಹಲ್ಲೆ ಮರೆಯಲಾಗುವುದು.ಡಿಸೆಂಬರ್ ೧೦ ರಂದು ಲಿಂಗಾಯತರ ಮೇಲಿನ ದೌರ್ಜನ ದಿನ ವನ್ನಾಗಿ ಆಚರಣೆ ಮಾಡಲಾಗುವುದು.ಗಾಂಧಿ ಭವನದಿಂದ ಮೌನ ರ್ಯಾಲಿ ಮಾಡಲಾಗುವುದು.ಕೈಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡಲಾಗುವುದು.ಇದುವರೆಗೆ ಯಾವುದೇ ಸರ್ಕಾರ ಲಿಂಗಾಯತ ರ ಮೇಲೆ ದೌರ್ಜನ್ಯ ಮಾಡಿಲ್ಲ.ಆದ್ರೆ ಈ ಸರ್ಕಾರ ಲಿಂಗಾಯತರ ಮೇಲೆ ದೌರ್ಜನ್ಯ ಮಾಡಿದೆ.ಡಿಸೆಂಬರ್ ೧೦ ರ ಪ್ರತಿಭಟನೆಗೆ ಹೆಚ್ಚಿನ ಸಮಾಜದ ಬಾಂಧವರು ಭಾಗವಹಿಸಬೇಕು ಹಾಗೂ ೨ ಎ ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿಮಹಾದೇವ ಈಟಿ,ಸುಧಾರಕ ಪಾಟೀಲ, ಚಿದಾನಂದ ಕಪಲಿ,ಜಯಾನಂದ ಕಪಲಿ,ಮಹಾದೇವ ಭೆಂಡವಾಡೆ,ಅಶೋಕ ಹರಗಾಪೂರೆ,ವಿಠ್ಠಲ ಕೊಕನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!