ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡಿಕೊಳ್ಳುವುದು, ವಯೋಮಿತಿ ಹೆಚ್ಚಳ ಮಾಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ವಿವಿಧ ವಿದ್ಯಾರ್ಥಿ ಸಂಘಟನೆಗಳು ಸೋಮವಾರ ಧಾರವಾಡ ಚಲೋ ಎಂಬ ಹೋರಾಟಕ್ಕೆ ಕರೆ ನೀಡಿದ್ದು, ಪ್ರತಿಭಟನೆ ಬೆಂಬಲಿಸಿ ಬೀದಿಗೆ ಇಳಿದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.
ವೈ- ಇನ್ನೂ ಧಾರವಾಡ ಚಲೋ ಹೋರಾಟಕ್ಕೆ ಪೊಲೀಸರು ಪರವಾನಿಗಿ ನೀಡದೇ ಇದ್ದರೂ, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಸೆಡ್ಡು ಹೊಡೆದು ಸೋಮವಾರ ಬೆಳಿಗ್ಗೆ ಧಾರವಾಡ ಶ್ರೀನಗರ ಸರ್ಕಲ್ ಹತ್ತಿರ ಹೋರಾಟ ಆರಂಭಿಸಿದ್ದರು. ಪ್ರತಿಭಟನೆ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳೂ ಭೇಟಿ ನೀಡಿದ್ದರು. ಪ್ರತಿಭಟನೆಗೆ ಅವಕಾಶ ಕೊಡದೇ ಇದ್ದರೂ ಪ್ರತಿಭಟನೆಗೆ ನಡೆಸುತ್ತಿರುವುದು ಏಕೆ ಎಂದು ಪೊಲೀಸರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಇದರಿಂದ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡದೇ ಶ್ರೀನಗರ ವೃತ್ತದಲ್ಲೇ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಈ ಪ್ರತಿಭಟನೆ ಧಾರವಾಡದ ಜ್ಯುಬಿಲಿ ವೃತ್ತಕ್ಕೆ ಬಂದು ದೊಡ್ಡಮಟ್ಟದಲ್ಲೇ ನಡೆಯಬೇಕಿತ್ತು. ಆದರೆ, ಪೊಲೀಸರು ಇದಕ್ಕೆ ಅವಕಾಶ ಕೊಡದೇ ಶ್ರೀನಗರ ವೃತ್ತದಲ್ಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

