DEATH

ಉಸಿರುಗಟ್ಟಿ ಮೂವರು ಯುವಕರ ದುರ್ಮರಣ ಪ್ರಕರಣ

Share

ಮನೆಯಲ್ಲಿ ಉಸಿರುಗಟ್ಟಿ ಮೂವರು ಯುವಕರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಯುವಕರ ಮರಣೋತ್ತರ ಪರೀಕ್ಷೆ ಬುಧವಾರ ಬಿಮ್ಸ್ ಶವಾಗಾರದಲ್ಲಿ ಮುಕ್ತಾಯಗೊಂಡು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ರಿಹಾನ್ ಮತ್ತೆ (22), ಸರ್ಪರಾಜ್ ಹರಪ್ಪನಹಳ್ಳಿ(22), ಮೋಯಿನ್ ನಾಲಬಂದ್(22) ಸಾವನ್ನಪ್ಪಿದರು. ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದ್ದ ಘಟನೆ ನಡೆದಿತ್ತು. ಮನೆಯಲ್ಲಿ ಬುಟ್ಟಿಯೊಂದರಲ್ಲಿ ಬೆಂಕಿ ಹಾಕಿ ಹೊಗೆ ಹಾಕಿಕೊಂಡು ಮಲಗಿದ್ದ ನಾಲ್ವರು ಮನೆಗೆ ಕಿಟಕಿಗಳಿಲ್ಲದೇ ವೆಂಟಿಲೇಶನ್ ಆಗದೇ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದರು.
ಓರ್ವ ಶಹಾನವಾಜ್ ಹರಪನಹಳ್ಳಿ ಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!