: ವಿಜಯಪುರ ನಗರದಲ್ಲಿ ಭಾನುವಾರದಂದು ಐತಿಹಾಸಿಕ ಆಸರ್ ಮಹಲ್ ಕಂದಕದಲ್ಲಿ ಬಿದ್ದು ಸಾವನಪ್ಪಿದ ಹಿನ್ನೆಲೆಯಲ್ಲಿ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಮೃತ ಬಾಲಕನ ಕುಟುಂಬದವರು ಮತ್ತು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಸರ್ ಮಹಲ್ ಕಂದಕಕ್ಕೆ ರಕ್ಷಣೆ ವ್ಯವಸ್ಥೆ ಇಲ್ಲದಿರುವುದೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿ, ಕೂಡಲೇ ಅಲ್ಲಿ ಸೂಕ್ತ ರಕ್ಷಣೆ ಕಲ್ಪಿಸುವಂತೆ ಒತ್ತಾಯಿಸಿದರು

