Belagavi

ಕಣಬರ್ಗಿ ಕೆರೆ ಬಳಿ ಪೌರಕಾರ್ಮಿಕರಿಗೆ ಗೌರವ: ರಾಮತೀರ್ಥನಗರದ ಸುರೇಶ ಯಾದವ ಪೌರಕಾರ್ಮಿಕರಿಗೆ ಸನ್ಮಾನ

Share

 

ಬೆಳಗಾವಿಯ ರಾಮತೀರ್ಥನಗರದ ಸುರೇಶ ಯಾದವ ಪೌoಡೇಶನ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭವು ದಿ:16-11-2025 ರಂದು ಕಣಬರ್ಗಿ ಕೆರೆಯ ಹತ್ತಿರವಿರುವ ಉದ್ಯಾನವನದಲ್ಲಿ ನೆರವೇರಿತು.

ಈ ಸಮಾರಂಭದ ಅಧ್ಯಕ್ಷಸ್ಥಾನವಹಿಸಿ ಪೌರಕಾರ್ಮಿಕರನ್ನು ಸತ್ಕರಿಸಿ ಮಾತನಾಡಿದ ಸುರೇಶ ಯಾದವ ಅವರು ತಮ್ಮ ಪೌoಡೇಶನ ವತಿಯಿಂದ ಪೌರಾಕಾರ್ಮಿಕರಿಗೆ ಪ್ರತಿ ವರ್ಷ ಮನೆಯಲ್ಲಿ ಗೌರವ ಸಲ್ಲಿಸುತ್ತಿದ್ದು. ಈ ವರ್ಷ ರಾಮತೀರ್ಥ ನಗರವು ನಗರಪಾಲಿಕೆಗೆ ಹೋಗಿರುವುದರಿಂದ ಸುಮಾರು 30 ಜನ ಕಾರ್ಮಿಕರಿದ್ದು. ಆದ್ದರಿಂದ ರಾಮತೀರ್ಥ ನಗರದ ರಹವಾಸಿಗಳೊಂದಿಗೆ ಮಾಡೋಣ ಅಂತಾ ಯೋಚಿಸಿ ಇವತ್ತು ಎಲ್ಲ ಪೌರಾಕಾರ್ಮಿಕರಿಗೆ ರಹವಾಸಿಗಳೊಂದಿಗೆ ಸನ್ಮಾನ ಮಾಡಲಾಯಿತು ಎಂದರು.
ಅದರಂತೆ ಪೌರಕಾರ್ಮಿಕರು ಸಹ ನಮ್ಮಂತೆ ಮನುಷ್ಯರಿದ್ದು ಸಾರ್ವಜನಿಕರು ಕಸವನ್ನು ಹಸಿ ಮತ್ತು ಒಣ ಬೆರ್ಪಡಿಸಿ ಮನೆಗೆ ಬಂದಾಗ ಕೊಡಬೇಕು. ಅವರಿಗೂ ನಮ್ಮಂತೆ ತಂದೆ ತಾಯಿ ಹಾಗೂ ಮಕ್ಕಳು ಇರುತ್ತಾರೆ. ಹಾಗಾಗಿ ನಾವು ಅವರನ್ನು ನಮ್ಮoತೆ ಮನುಷ್ಯರೆಂದು ತಿಳಿದು ಸಹಕರಿಸಬೇಕು. ಅದಲ್ಲದೆ ಕಾರ್ಮಿಕರು ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು, ತಮಗೆ ಏನಾದರೂ ತೊಂದರೆ ಬಂದರೆ ದಿನದ ಇಪ್ಪತ್ತು ನಾಲ್ಕು ಗಂಟೆ ನನಗೆ ಫೋನ್ ಮಾಡಿ ಎಂದು ಹೇಳಿದರು.
.


ರಾಮತೀರ್ಥ ನಗರ ಸೇವಕರಾದ ಹನುಮಂತ ಕೊಂಗಲಿ, ಹಾಗೂ ರಾಮತೀರ್ಥ ನಗರದ ರಹವಾಸಿಗಳಾದ ನಿರ್ವಾಣಿ , ಸುರೇಶ ಉರ್ಬಿನಟ್ಟಿ, ತೋರಗಲ, ಬಿಡನಾಳ, ಶಿವಾನಂದ ನಂದಗಾವಿ, ಖೋತ್, ವಿಲಾಸ ಕೆರೂರ, ತಾಹೀರ, ಅಪ್ಪಯ್ಯ ಕೋಲಕಾರ, ರಾಚಯ್ಯ ಮಠಪತಿ, ಚರಂತಿಮಠ, ಹಾಗೂ ಕುಮಟೆಕಾರ್, ಸಂತೋಷ್ ಮೆರೆಕಾರ್, ಕೆಂಪಣ್ಣ ಹಾಗೂ ರಾಮತೀರ್ಥ ನಗರದ ರಹವಾಸಿಗಳು ಪೌರಕಾರ್ಮಿಕರೊಂದಿಗೆ ಅಲ್ಪೊಪಹಾರ ಸ್ವೀಕರಿಸಿದರು. ಅನೇಕ ಗಣ್ಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Tags:

error: Content is protected !!