ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವಿಗೆ ಕಾರಣರಾದವರ ಮೇಲೆ ಸರಕಾರ ತಕ್ಷಣ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳವು ಆಗ್ರಹಿಸಿದೆ.
ಕಳೆದ ಒಂದು ವಾರದಲ್ಲಿ ಬೆಳಗಾವಿ ಸಮೀಪದ ಭೂತರಾಮನಹಟ್ಟಿಯಲ್ಲಿರುವ ಮೃಗಾಲಯದಲ್ಲಿ ಈ ವರೆಗೆ ಒಟ್ಟು ೩೦ ಕೃಷ್ಣಮೃಗಗಳ ಸಾವಾಗಿರುವುದು ತಮಗೆ ತಿಳಿದಿರುವ ಸಂಗತಿಯಾಗಿದೆ. ಚಿಕ್ಕಮಕ್ಕಳ ಆಕರ್ಷಣೀಯ ಕೇಂದ್ರವಾಗಿದ್ದ ಉತ್ತರ ಕರ್ನಾಟಕದ ಭಾಗದ ಈ ಮೃಗಾಲಯ ಅಭಿವೃದ್ಧಿಯಾಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇಲ್ಲಿಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿ ಕೃಷ್ಣಮೃಗಗಳು ಇಷ್ಟು ಸಂಖ್ಯೆಯಲ್ಲಿ ಸಾವಿಗಿಡಾಗಿರುವುದು ಅತ್ಯಂತ ಖೇದಕರ ಸಂಗತಿ. ಈ ಹಿಂದೆ ಸಿಂಹವೊಂದು ಸಾವಿಗೀಡಾಗಿತ್ತು. ಈಗ ಕೃಷ್ಣಮೃಗಗಳು ಸಾವಿಗೀಡಾಗಿವೆ. ಇವುಗಳಿಗೆ ಹಾಕುತ್ತಿರುವ ಮೇವು ಆಹಾರಗಳನ್ನು ಅಧಿಕಾರಿಗಳು ಮೇಲಿಂದ ಮೇಲೆ ಪರಿಶೀಲಿಸಬೇಕಾಗಿತ್ತು. ಈ ಕೃಷ್ಣಮೃಗಗಳ ಸಾವಿಗೆ ಕಾರಣರಾದವರ ಮೇಲೆ ಸರಕಾರ ತಕ್ಷಣ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರು ಆನಂದ ಕರಲಿಂಗಣ್ಣವರ, ನಗರ ಕಾರ್ಯದರ್ಶಿ ನಾಗೇಶ್ ಕಾಂಬ್ಳೆ,ಜಿಲ್ಲಾ ಕಾರ್ಯದರ್ಶಿ ಸ್ವರೂಪ ಕಾಲಕುಂದ್ರಿ, ಉಮೇಶ್ ಚಿಂಡಕ, ಹೇಮಂತ್ ಹವಳ ರಾಘವೇಂದ್ರ ಕಟ್ಟಿ, ವಿಜಯ ಜಾಧವ, ವಿವೇಕ್ ರೇವಣಕರ, ವಾದಿರಾಜ್ ಗಾಂಗುರ್ ಇತರರು ಉಪಸ್ಥಿತರಿದ್ದರು

