Vijaypura

ಲಿವಿಂಗ್ ರಿಲೇಷನ್‌ ಮಹಿಳೆಯಿಂದ ಪ್ರಿಯಕರನ ಕೊಲೆ

Share

ಲಿವಿಂಗ್ ರಿಲೇಷನ್‌ ಸಂಬಂಧದ ಕಲಹ ಕೊಲೆಗೆ ತಿರುಗಿದ ಭೀಕರ ಘಟನೆ ನಡೆದಿದೆ. ವಿಜಯಪುರ ನಗರದ ಜುಮ್ಮಾ ಮಸೀದಿ ಬಳಿಯ ಅಮನ್ ಕಾಲೋನಿಯಲ್ಲಿ ನಡೆದ ಈ ಘಟನೆಯಲ್ಲಿ ಸಮೀರ್ ಉರ್ಫ್‌ ಪಿಕೆ ಇನಾಂದಾರ್‌ (26) ಎಂಬ ಯುವಕ ಕೊಲೆಯಾಗಿದ್ದಾನೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಮೀರ್ ಜೊತೆ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ತಯ್ಯಬಾ ಭಾಗವಾನ್ ಎಂಬ ಮಹಿಳೆ, ತನ್ನ ಸಹೋದರ ಅಸ್ಲಮ್ ಭಾಗವಾನ್‌ನ ಸಹಾಯದಿಂದ ಕತ್ತು ಹಿಸುಕಿ ಸಮೀರ್‌ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸಮೀರ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಗೋಲಗುಂಬಜ್‌ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮೀರ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಕುರಿತು ಗೋಲಗುಂಬಜ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

Tags:

error: Content is protected !!