BELAGAVI

ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ

Share

ಬೆಳಗಾವಿ:
ಅಂಜುಮನ್ ಆರ್ಟ್ಸ್, ಕಾಮರ್ಸ್ ಮತ್ತು ಎಂ.ಕಾಂ ಮಹಾವಿದ್ಯಾಲಯ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ, IQAC, ELC ಮತ್ತು NSS ಘಟಕದ ಸಹಯೋಗದಲ್ಲಿ 17/11/2025 ರಂದು ಮತದಾರರ ಜಾಗೃತಿ ರ‍್ಯಾಲಿಯನ್ನು ಆಯೋಜಿಸಲಾಯಿತು.

 

 

ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ NSS ಸಂಯೋಜಕರು ರ‍್ಯಾಲಿಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ತಿಳಿಸುವ ಘೋಷಣೆಗಳೊಂದಿಗೆ ಕೈಫ್ಲೆಕ್ಸ್ ಹಾಗೂ ಪ್ಲೇಕಾರ್ಡ್‌ಗಳನ್ನು ಹಿಡಿದು ಭಾಗವಹಿಸಿದರು.

ಈ ರ‍್ಯಾಲಿಯ ಉದ್ದೇಶ ಮುಂಬರುವ ಚುನಾವಣೆಯಲ್ಲಿ ನಾಗರಿಕರು, ವಿಶೇಷವಾಗಿ ಯುವ ಮತದಾರರು, ತಮ್ಮ ಮತವನ್ನು ಜವಾಬ್ದಾರಿಯಿಂದ ಚಲಾಯಿಸುವಂತೆ ಪ್ರೇರೇಪಿಸುವುದಾಗಿತ್ತು. ಮತದಾನ ಹಕ್ಕು, ನೈತಿಕ ಮತದಾನ ಮತ್ತು ನಾಗರಿಕ ಜವಾಬ್ದಾರಿಯ ಮಹತ್ವವನ್ನು ವಿದ್ಯಾರ್ಥಿಗಳು ಒತ್ತಿ ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮತದಾನ ಮಾಡುವ ಮತ್ತು ಇತರರನ್ನು ಮತದಾನಕ್ಕೆ ಪ್ರೇರೇಪಿಸುವ ಪ್ರತಿಜ್ಞಾವಿಧಿ ನಡೆಯಿತು. ಇಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಸಂಸ್ಥೆ ತಿಳಿಸಿತು.
ಅಂಜುಮನ್ ಸಂಸ್ಥೆಯ ಬೋಧಕ ಬೋಧಕೇ ತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಅಂಜುಮನ್ ಮಹಾವಿದ್ಯಾಲಯದಿಂದ ಚೆನ್ನಮ್ಮನ ಸರ್ಕಲ್ಲದವರಿಗೆ ಹೋಗಿ ನಂತರ ಡಿಸಿ ಆಫೀಸ್ ಅವರಿಗೆ ಜಾಥಾ ಬಂದು ನಾಗರಿಕರಿಗೆ ಮತದಾನ ಮಾಡುವ ಜಾಗೃತಿಯನ್ನು ಮೂಡಿಸಿದರು.


ಜಾಥಾದಲ್ಲಿ ಭಾಗವಹಿಸಿದ ಪ್ರಾಂಶುಪಾಲರಾದ ಡಾ. ಎಚ್ ಐ ತಿಮ್ಮಾಪುರ ಅವರು ಚೆನ್ನಮ್ಮ ಸರ್ಕಲದಲ್ಲಿ ಮಾತನಾಡಿ ಪ್ರಜೆಗಳೇ ಪ್ರಭುಗಳು ಮತದಾನ ನಮ್ಮ ಹಕ್ಕು ನಾವು ಒಳ್ಳೆಯವರಿಗೆ ಮತ ಹಾಕಿ ಒಳ್ಳೆಯ ದುರಿಣರನ್ನು ಆರಿಸಿ ತಂದು ಆದರ್ಶ ರಾಷ್ಟ್ರವನ್ನು ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು. ನಮ್ಮ ಸಂವಿಧಾನದಲ್ಲಿ ನಮಗೆ ಮತ ಹಾಕುವ ಹಕ್ಕನ್ನು ನೀಡಲಾಗಿದೆ ಹೀಗಾಗಿ ಅದರ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಮತ ಹಾಕಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಕರೆಕೊಟ್ಟರು.
ಉಪ ಪ್ರಾಚಾರ್ಯ ರಾದ ಎಸ್.ಎಂ .ಖತಿಬ ಅವರು ಹಿಂದಿ ಭಾಷೆಯಲ್ಲಿ ಮತದಾನದ ಮಹತ್ವವನ್ನು ಕುರಿತು ಮಾತನಾಡಿದರು. ಡಾ ಇರ್ಫಾನ್ ಸಿಲೆದಾರ ಅವರು ಜಾಥಾದ ನೇತೃತ್ವ ವಹಿಸಿದ್ದರು

Tags:

error: Content is protected !!