bagalkot

ಸಕ್ಕರೆ ಕಾರ್ಖಾನೆ ಬಳಿ ಟ್ರಾಲಿಗಳಿಗೆ ಬೆಂಕಿ ಹಚ್ಚಿದ ಪ್ರಕರಣ- ರೈತರ ಮುಖಂಡರ ವಿರುದ್ಧ ಎಪ್ಐಆರ್

Share

ಕಬ್ಬಿನ ದರ ನಿಗದಿಗಾಗಿ ರೈತರ ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತೆರಳಿತ್ತು.ತಾಳ್ಮೆ ಕಳೆದುಕೊಂಡ ರೈತ ಹೋರಾಟಗಾರರು ಸಮೀರವಾಡಿ ಸಕ್ಕರೆ ಕಾರ್ಖಾನೆ ಮುತ್ತಿಗೆಗೆ ಮುನ್ನುಗಿದ್ರು.ಆ ವೇಳೆ ಕಾರ್ಖಾನೆ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ರು.ಇದೀಗಾಲ್ಲಿ ನಡೆದ ಕಲ್ಲತೂರಾಟ ಮತ್ತು ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ.ರೈತ ಸಂಘದ 11 ಜನ ಕಾರ್ಯಕರ್ತರನ್ನ ವಶಕ್ಕೆ ಪಡೆಯಲಾಗಿದೆ.ಇದ್ರ ಬೆನ್ನಲ್ಲೆ ರೈತ ಸಂಘ ಮುಧೋಳದಲ್ಲಿ ತುರ್ತು ಸಭೆ ನಡೆಸಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಪ್ರಕರಣ…

ಚುರುಕುಗೊಂಡ ಪೊಲೀಸರ ತನಿಖೆ,ಮಹಾಲಿಂಗೂರ ಪೊಲೀಸ್ ಠಾಣೆಯಲ್ಲಿ 3 FIR ದಾಖಲು..

ರೈತರ ಸಂಘದ 17 ಜನ ತೇರದಾಳ ಪಿಎಸ್ ಐಯಿಂದ ದೂರಿನ ಮೇರೆಗೆ ಎಫ್ ಐಆರ್…

ಕಾರ್ಖಾನೆ ಪರವಾಗಿ ಬಂದಿದ್ದ 5 ಜನರ ವಿರುದ್ಧ ಮಹಾಲಿಂಗಪೂರ ಪಿಎಸ್ಐಯಿಂದ ಎಫ್ ಐ ಆರ್

ಎಫ್ ಐಆರ್ ದಾಖಲು ಬೆನ್ನಲ್ಲೆ ಮುಧೋಳದಲ್ಲಿ ತುರ್ತು ಸಭೆ ಕರೆದ ರೈತ ಸಂಘಟನೆ..

ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಆಕ್ರೋಶ… ಎಚ್ಚರಿಕೆ..

ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಜಿಎಲ್ ಬಿಸಿ ಐಬಿಯಲ್ಲಿ ನಡೆದ ಸಭೆ..

ಒಂದೆಡೆ ಸಕ್ಕರೆ ಕಾರ್ಖಾನೆ ಆವರಣದಲ್ಲಿಹೊತ್ತಿ ಉರಿಯುತ್ತಿರೋ ಕಬ್ಬು ತುಂಬಿದ ಟ್ಯಾಕ್ಟರ್ ಗಳು.ಮತ್ತೊಂದೆಡೆ ಬೆಂಕಿ ಪ್ರಕರಣದ ವೀಕ್ಷಣೆ ಮಾಡಿದ ಸಕ್ಕರೆ ಸಚಿವ,ಅಬಕಾರಿ ಸಚಿವರು.ಇನ್ನೊಂದೆಡೆ ಕೃತ್ಯ ಎಸಗಿದ್ದು ರೈತರಲ್ಲ,ಕಿಡಿ ಬೇಡ ಗಳು,ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕ್ರಮ ವಹಿಸ್ತಿ ಅಂದಿದ್ದ ಎಡಿಜಿಪಿ ಹಿತೇಂದ್ರ.ಇಂತಹ ಬೆಂಕಿ ದುರಂತ ನಡೆದಿದ್ದು ಬಾಗಲಕೋಟೆ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ.ಹೌದು ಕಬ್ಬಿನ ದರಕ್ಕಾಗಿ ನಡೆದ ರೈತರ ಪ್ರತಿಭಟನೆ ಕೈ ಮಿರಿ ನವೆಂಬರ್ 13ರ ಸಂಜೆ ಕಾರ್ಖಾನೆಗೆ ಮುತ್ತಿಗೆ ಹಾಕಿದಾಗ ನಡೆದ ಬೆಂಕಿ ದುರಂತ.ಇದೀಗ ಪ್ರಕರಣದ ರನಿಖೆ ಚುರುಕುಗೊಂಡಿದ್ದು,ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ 3 ಎಪ್ ಐಆರ್ ದಾಖಲಾಗಿವೆ.ತೇರದಾಳ ಪಿಎಸ್‌ಐ ಶಿವಾನಂದ್ ಸಿಂಗನ್ನವರ ನೀಡಿದ ದೂರಿನ ಮೇರೆಗೆ,ರಾಜ್ಯ ರೈತ ಸಂಘದ 17 ಜನರ ವಿರುದ್ಧ ಎಫ್ಆರ್ ದಾಖಲಾಗಿದೆ.ರಾಜ್ಯರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ,ಸುಭಾಸ್ ಶಿರಬೂರ,ಈರಪ್ಪ ಹಂಚನಾಳ,ಮುತ್ತಪ್ಪ ಕೊಮಾರ್,ದುಂಡಪ್ಪ ಯರಗಟ್ಟಿ ಸೇರಿದಂತೆ 17 ಜನ್ರ ವಿರುದ್ದ ಎಪ್ಐಆರ್ ದಾಖಲಾಗಿದೆ.ಈಗಾಲೇ 11 ಜನ ರೈತ ಸಂಘದ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ ಪೊಲೀಸರು.ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ ಐಬಿಯಲ್ಲಿ ರಾಜ್ಯ ರೈತ ಸಂಘ ತುರ್ತು ಸಭೆ ಕರೆದು ಸರ್ಕಾರ ಮತ್ತು ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ರು.ಸರ್ಕಾರಕ್ಕೆ ತಾಖತ್ ಇದ್ರೆ ರೈತ ಸಂಘದ ಕಾರ್ಯಕರ್ತರು ಎಲ್ಲರು ಇಲ್ಲೆ ಇದ್ದಿವಿ ಜೈಲಿಗೆ ಕಳಿಸಲಿ ಎಂದು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದ್ರು…

ಇನ್ನು 17 ರೈತ ಮುಖಂಡರ ಮೇಲೆ ಹಾಕಿದ ಕೇಸ್ ನಲ್ಲಿ ಟ್ರಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಆರೋಪ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ, ಟ್ರಾಕ್ಟರ್ ದ್ವಂಸ ಆರೋಪ ಎಂದು ನಮೂದಿಸಲಾಗಿದೆ.ಸಕ್ಕರೆ ಸಚಿವರು ಶಿವಾನಂದ್ ಪಾಟೀಲ್,ಉಸ್ತುವಾರಿ ಸಚಿವ ತಿಮ್ಮಾಪೂರ ಹಾಗೂ ಎಡಿಜಿಪಿ ಘಟನಾ ಸ್ಥಳಕ್ಕೆ ಬೇಟಿ ನೀಡಿದಾಗ. ಇದು ಕಿಡಿಗೇಡಿಗಳು ಕೃತ್ಯ,ರೈತರು ಬೆಂಕಿ ಹಚ್ಚಿದ್ದಲ್ಲ ಎಂದು ಹೇಳಿದ್ದಾರೆ..ಹಾಗಾದ್ರೆ ಪೊಲೀಸರ ದೃಷ್ಠಿಯಲ್ಲಿ ರೈತರೇ ಕಿಡಿಗೇಡಿಗಳಾದ್ರಾ,ಅಲ್ದೆ ಸಮೀರವಾಡಿ ಕಾರ್ಖಾನೆ ಪರವಾಗಿ ಬಂದಿದ್ದ 5 ಜನರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.ಕಾರ್ಖಾನೆ ಸಿಬ್ಬಂದಿ ನೀಡಿರೋ ದೂರು ಸೇರಿ ಒಟ್ಟು ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ ಐಆರ್ ದಾಖಲಾಗಿವೆ.ಈಗಾಗಲೇ ರಾಜ್ಯ ರೈತ ಸಂಘದ 11 ಜನ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು ಮುಧೋಳ ರೈತರಲ್ಲಿ ಮತ್ರಷ್ಟು ಆಕ್ರೋಶ ಹೆಚ್ಚಿಸಿದೆ.ಸಿದ್ದಪ್ಪ ಬಳಗಾನೂರ,ಮಲ್ಲು ಮೆಟಗುಡ್,ರಾಜುಗೌಡ,ಬಸು ನಾಯ್ಕರ್ ಸೇರಿದಂತೆ 11 ಜನ್ರನ್ನ ಪೊಲೀಸರು ವಶಕ್ಕೆ ಪಡೆದಿದ್ದು ರೈತರಲ್ಲಿ ಕಿಚ್ಚು ಹೆಚ್ಚುವಂತೆ ಮಾಡಿದೆ.ಮುಧೋಳ ಐಬಿಯಲ್ಲಿ ಸೇರಿ ಸಭೆ ಮಾಡಿದ ರೈತ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ,ಜಿಲ್ಲಾಉಸ್ತುವಾರಿ ಸಚಿವರಿಗೆ,ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಷ ಎಚ್ಚರಿಕೆ ರವಾನಿಸಿದ್ದಾರೆ.ರೈತರು ಯಾವುದೇ ತಪ್ಪು ಮಾಡಿಲ್ಲ ಅವರನ್ನ ಬಿಡುಗಡೆ ಮಾಡಬೇಕು. ಇಲ್ನ ವಾದಲ್ಲಿ ಮುಧೋಳ ನಗರದ ಐಬಿಯಲ್ಲಿ ಇದ್ದೇವೆ ಬಂದು ನನ್ನ ಅರೆಸ್ಟ್ ಮಾಡಿ ಜೈಲಿಗೆ ಹಾಕರಿ ಎಂದು ಕರೆ ನೀಡಿದ್ದಾರೆ ರೈತ ಮುಖಂಡರು…

ಒಟ್ಟಿನಲ್ಲಿ ಕಬ್ಬಿಗೆ ಯೋಗ್ಯ ಬೆಲೆಗಾಗಿ ಮುಧೋಳದಲ್ಲಿ ನಡೆದಿದ್ದ ಪ್ರತಿಭಟನೆ ವಿಕೊಪಕ್ಕೆ ತೆರಳಿ ಸಮಿರವಾಡಿ ಸಕ್ಕರೆ ಕಾರ್ಖಾನೆ ಬಳಿ ನಡೆದ ಬೆಂಕಿ ದುರಂತದ ಪ್ರಕರಣದ ತನಿಕೆ ಚುರುಕಾಗಿ ನಡೆದಿದ್ದು,ರೈತರ ಬಂಧನ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಉಸಿರುಗಟ್ಟಿಸುವಂತ ಸ್ಥಿತಿ ನಿರ್ಮಾಣಾಗಿದ್ದಂತೂ ಸುಳ್ಳಲ್ಲ…

Tags:

error: Content is protected !!