



ಬೆಳಗಾವಿಯ ಶಿವಬಸವನಗರದಲ್ಲಿರುವ ಶ್ರೀ ಜ್ಯೋತಿಬಾ ಮಂದಿರದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರತಿ ವರ್ಷದಂತೆ ಈ ಬಾರಿಯೂ ಬೆಳಗಾವಿಯ ಬೆಳಗಾವಿಯ ಶಿವಬಸವನಗರದಲ್ಲಿರುವ ಶ್ರೀ ಜ್ಯೋತಿಬಾ ಮಂದಿರದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೃಹತ್ ಆಕರ್ಷಕ ರಂಗೋಲಿಯನ್ನು ಬಿಡಿಸಿ, ದೇವಸ್ಥಾನದ ಆವರಣವನ್ನು ಶೃಂಗರಿಸಿ, ಸಹಸ್ರಾರು ಭಕ್ತರು ಸ್ವಯಂಪ್ರೇರಣೆಯಿಂದ ದೀಪಗಳನ್ನು ಹಚ್ಚಿ ಲಕ್ಷ ದೀಪೋತ್ಸವಕ್ಕೆ ಸಾಕ್ಷಿಯಾದರು. ಇದಕ್ಕೂ ಮೊದಲು ಶ್ರೀ ಜ್ಯೋತಿಬಾ ದೇವರಿಗೆ ವಿಶೇಷ ಪೂಜೆ, ಮಹಾ ಆರತಿ ನೆರವೇರಿಸಲಾಯಿತು. ನಂತರ ಗಣ್ಯರ ಹಸ್ತದಿಂದ ದೀಪೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.
ಜ್ಯೋತಿಬಾ ಮಂದಿರದ ಲಕ್ಷ ದೀಪೋತ್ಸವದ ಹಿನ್ನೆಲೆ 20 ಅಡಿಯ ಒಂದು ಬೃಹತ್ ರಂಗೋಲಿಯನ್ನು ಬಿಡಿಸಲಾಗಿದೆ.
ಸಾತ್ವಿಕ ಅವರು ಕಳೆದ 8 ವರ್ಷಗಳಿಂದ ನಾವು ವಿವಿಧ ಮಂದಿರಗಳಲ್ಲಿ ರಂಗೋಲಿಯ ಸೇವೆಯನ್ನು ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಉತ್ಸವ ಅಥವಾ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ನಮ್ಮ ತಂಡದಿಂದ ರಂಗೋಲಿಯನ್ನು ಬಿಡಸಲಾಗುತ್ತದೆ.
ಭಾವಿಕಾ ನೌಖಂಡಕರ ಅವರು, ನಾವು ಹಲವಾರು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ರಂಗೋಲಿ ಸೇವೆಯನ್ನು ಮಾಡುತ್ತೇವೆ. 2 ದಿನಗಳ ಕಾಲದ ಅವಧಿಯಲ್ಲಿ ಈ ರಂಗೋಲಿಯನ್ನು ಬಿಡಿಸಲಾಯಿತು ಎಂದರು.
ನಂತರ ನಡೆದ ಮಹಾಪ್ರಸಾದದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.

