BELAGAVI

ಬೆಳಗಾವಿಯಲ್ಲಿ ಕರಾಟೆ ರೆಫರಿ-ಜಡ್ಜ್ ಸೆಮಿನಾರ್ ಯಶಸ್ವಿ: ಕ್ರೀಡಾ ಬೆಳವಣಿಗೆಗೆ ಮಹತ್ವದ ಹೆಜ್ಜೆ!

Share

ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಸ್ಥೆ ವತಿಯಿಂದ ಪ್ರಥಮ ಅಧಿಕೃತ ರೆಫರಿ ಮತ್ತು ಜಡ್ಜ್ ಸೆಮಿನಾರ್ ಹಾಗೂ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಬೆಳಗಾವಿಯ ಲೋಕಮಾನ್ಯ ಭವನ ಗಣೇಶಪುರದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಸ್ಥೆ ವತಿಯಿಂದ ಪ್ರಥಮ ಅಧಿಕೃತ ರೆಫರಿ ಮತ್ತು ಜಡ್ಜ್ ಸೆಮಿನಾರ್ ಹಾಗೂ ಪರೀಕ್ಷೆ ಯಶಸ್ವಿಯಾಗಿ ನೆರವೇರಿತು.
ಜಿಲ್ಲೆಯಲ್ಲಿ ಕರಾಟೆ ಕ್ರೀಡೆಯ ಬೆಳವಣಿಗೆಗೆ ಹಾಗೂ ಗುಣಮಟ್ಟದ ತೀರ್ಪುಗಾರರನ್ನು ಸೃಷ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 50 ವಿದ್ಯಾರ್ಥಿಗಳು ಜಡ್ಜ್ ಪರೀಕ್ಷೆಗೆ ಹಾಜರಾಗಿದ್ದರೆ, ಅಕ್ಷಯ್ ಪರಮೋಜಿ, ಚಂದನ್ ಜೋಶಿ, ಅಮಿತ್ ವಿಸಾಣೆ, ಸಹೀರ್ ಶೇಖ್ ಮತ್ತು ಸಚಿನ್ ಭರಮಣ್ಣವರ ಸೇರಿದಂತೆ ಐವರು ಸದಸ್ಯರು ರೆಫರಿ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಕರಾಟೆ ಕ್ರೀಡಾ ಕ್ಷೇತ್ರದ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಭಾರ್ಗವ ರೆಡ್ಡಿ ಮತ್ತು ಡಬ್ಲ್ಯೂಕೆಎಫ್ ರೆಫರಿ ಶಿವದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ರೆಫರಿಗಳ ಸಂಖ್ಯೆ ಕಡಿಮೆ ಇರುವುದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಕ್ರೀಡಾಳುಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಇಡೀ ಕಾರ್ಯಕ್ರಮವು ಕೆಐಓ ಅಧ್ಯಕ್ಷ ಹನ್ಷಿ ಭರತ್ ಶರ್ಮಾ ಮತ್ತು ಎಕೆಎಸ್ ಕೆಎ ಅಧ್ಯಕ್ಷ ಶಿಹಾನ್ ಅರುಣ್ ಮಾಚಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಸ್ಥೆಯ ಕಾರ್ಯದರ್ಶಿ ಜೀತೇಂದ್ರ ಬಿ ಕಾಕತಿಕರ್ ಅವರು ಈ ಸೆಮಿನಾರ್‌ನ ಯಶಸ್ಸಿಗೆ ಶ್ರಮಿಸಿದ್ದಾರೆ. ಈ ಕುರಿತು ಅವರು ಹೆಚ್ಚಿನ ಮಾಹಿತಿಯನ್ನು ನೀಡಿದರು.

ತರಬೇತಿ ಹಾಗೂ ಪರೀಕ್ಷೆಯಲ್ಲಿ ಪಾಲ್ಗೊಂಡ ಹಲವರು ಪಾಲ್ಗೊಂಡಿದ್ದರು.

Tags:

error: Content is protected !!